ADVERTISEMENT

ಬಿಬಿಎಂಪಿ: 39 ಹೆಲ್ತ್ ಸೂಪರ್‌ವೈಸರ್ ಹುದ್ದೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 17:33 IST
Last Updated 21 ಜುಲೈ 2024, 17:33 IST
<div class="paragraphs"><p>ಬಿಬಿಎಂಪಿ&nbsp;</p></div>

ಬಿಬಿಎಂಪಿ 

   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ 39 ಹೆಲ್ತ್ ಸೂಪರ್ ವೈಸರ್ ಹುದ್ದೆಗಳನ್ನು ಸೃಜಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ಪಾಲಿಕೆ ವ್ಯಾಪ್ತಿಯ 75 ಉಪ ವಿಭಾಗಗಳಲ್ಲಿ ಸದ್ಯ 36 ಹೆಲ್ತ್ ಸೂಪರ್‌ವೈಸರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ವಿಭಾಗಕ್ಕೆ ತಲಾ ಒಬ್ಬರು ಹೆಲ್ತ್ ಸೂಪರ್‌ ವೈಸರ್ ನೇಮಿಸಲು ಇನ್ನೂ 39 ಹುದ್ದೆಗಳನ್ನು ಸೃಜಿಸುವಂತೆ ಬಿಬಿಎಂಪಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಅದರಂತೆ 39 ಹಿರಿಯ ಆರೋಗ್ಯ ನಿರೀಕ್ಷಕರ (ಗ್ರೂಪ್ ಸಿ) ಹುದ್ದೆಯನ್ನು ಹೆಲ್ತ್‌ ಸೂಪರ್‌ವೈಸರ್‌ (ಗ್ರೂಪ್ ಬಿ) ಹುದ್ದೆಗೆ ಉನ್ನತೀಕರಿಸಿ ಆದೇಶ ಹೊರಡಿಸಲಾಗಿದೆ. 

ADVERTISEMENT

ಉನ್ನತೀಕರಿಸಲಾದ 39 ಹುದ್ದೆಗಳಿಗೆ ಉಂಟಾಗುವ ವೆಚ್ಚವನ್ನು ಬಿಬಿಎಂಪಿ ತನ್ನ ಸ್ವಂತ ನಿಧಿಯಿಂದ ಭರಿಸಬೇಕು. ಪಾಲಿಕೆಯ ಆರೋಗ್ಯ ವಿಭಾಗದಲ್ಲಿ ಮಂಜೂರಾಗಿರುವ ಒಟ್ಟು ಹುದ್ದೆಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ನಗರಾಭಿವೃದ್ಧಿ ಇಲಾಖೆ ಷರತ್ತು ವಿಧಿಸಿದೆ.

ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಚಟುವಟಿಕೆ, ಘನ ತ್ಯಾಜ್ಯ ನಿರ್ವಹಣೆಯ ಮೇಲುಸ್ತುವಾರಿ ಸೇರಿ ವಿವಿಧ ಜವಾಬ್ದಾರಿಗಳನ್ನು ಹೆಲ್ತ್‌ ಸೂಪರ್‌ವೈಸರ್‌ಗಳು ನಿರ್ವಹಿಸಬೇಕು ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.