ದಾಬಸ್ ಪೇಟೆ: ಸೋಂಪುರ ಹೋಬಳಿಯಾದ್ಯಾಂತ ಗುರುವಾರ ಬೆಳಗ್ಗಿನ ಜಾವ ಧಾರಾಕಾರ ಮಳೆಯಾಗಿದೆ.
ಮಳೆಯಿಂದಾಗಿ ನಿತ್ಯದ ಕೆಲಸಗಳಿಗೆ ತೊಂದರೆ ಉಂಟಾಯಿತು. ಹೊಲಗಳಲ್ಲಿ ನೀರು ನಿಂತ ಪರಿಣಾಮ ರಾಗಿ ಪೈರು ಕೊಳೆಯಲು ಆರಂಭಿಸಿದೆ.
ಕುರುವೆಲ್ ತಿಮ್ಮನಹಳ್ಳಿ ಗ್ರಾಮದ ರೈತ ಸಂತೋಷ್ ಅವರ ಬಾಳೆ ಗಿಡದ ಕಂದಕ (ಟ್ರoಚ್) ಗಳಲ್ಲಿ ನೀರು ತುಂಬಿಕೊಂಡಿತ್ತು.
‘ತಿಂಗಳ ಹಿಂದೆ 2 ಸಾವಿರ ಬಾಳೆ ಗಿಡಗಳನ್ನು ನಾಟಿ ಮಾಡಿದ್ದೆ. ನಿರಂತರ ಮಳೆಯಿಂದಾಗಿ ಕಂದಕದಲ್ಲಿ ನೀರು ನಿಂತು ಸುಮಾರು ಸಾವಿರ ಸಸಿಗಳು ಕೊಳೆತು ಹೋಗಿವೆ. ಇದೇ ರೀತಿ ಮಳೆ ಮತ್ತಷ್ಟು ಸಸಿಗಳು ಕೊಳೆಯುತ್ತವೆ’ ಎಂದು ರೈತ ಸಂತೋಷ್ ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.