ADVERTISEMENT

ನಿರಂತರ ಮಳೆ: ಬೆಳ್ಳಂದೂರು ಇಕೋಸ್ಪೇಸ್ ಬಳಿ ಸಂಚಾರ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 30 ಮೇ 2023, 19:38 IST
Last Updated 30 ಮೇ 2023, 19:38 IST
ಬೆಳ್ಳಂದೂರು ಇಕೋಸ್ಪೇಸ್ ಬಳಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದರಿಂದ ವಾಹನ ಸವಾರರು ಪರದಾಡಿದರು.
ಬೆಳ್ಳಂದೂರು ಇಕೋಸ್ಪೇಸ್ ಬಳಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದರಿಂದ ವಾಹನ ಸವಾರರು ಪರದಾಡಿದರು.   

ಕೆ.ಆರ್.ಪುರ: ನಿರಂತರ ಸುರಿದ ಮಳೆಯಿಂದಾಗಿ ಮಂಗಳವಾರ ಸಾಯಂಕಾಲ ಬೆಳ್ಳಂದೂರಿನ ಹೊರ ವರ್ತುಲ ರಸ್ತೆಯ ಇಕೋಸ್ಪೇಸ್‌ ಬಳಿ ಸಂಚಾರ ಅಸ್ತವ್ಯಸ್ತಗೊಂಡಿತು.

ಮುಂಗಾರು ಮಳೆ ಆರಂಭದಲ್ಲಿ ಈ ಸಮಸ್ಯೆ ಮರುಕಳಿಸಿದೆ. ಮಂಗಳವಾರ ಸುರಿದ ಮಳೆಯಿಂದಾಗಿ ಜನರು ತಾಸು ಗಟ್ಟಲೆ ಟ್ರಾಫಿಕ್ ನಲ್ಲಿ ಸಿಲುಕಿ ಪರದಾಡಿದರು. ವಾಹನಗಳು ಮಳೆ ನೀರಿನಲ್ಲಿ ಸಿಲುಕಿದವು. ಅತಿ ಹೆಚ್ಚು ಐಟಿಬಿಟಿ ಕ್ಷೇತ್ರ ಹೊಂದಿರುವ ಮಹದೇವಪುರ ಕ್ಷೇತ್ರ ಪ್ರತಿ ಸಾರಿ ಮಳೆ ಬಂದಾಗೆಲ್ಲೆಲ್ಲ ಈ ಸಮಸ್ಯೆ ಮಾಮೂಲಿ ಎನ್ನುವಂತಾಗಿತ್ತು.

ಕಳೆದ ಸಾರಿ ಎದುರಾದ ಸಮಸ್ಯೆಗೆ ಪರಿಹಾರವಾಗಿ ಬಿಬಿಎಂಪಿ ಅಲ್ಲಲ್ಲಿ ರಾಜಾ ಕಾಲುವೆ ಕಾಮಗಾರಿ ಕೈಗೆತ್ತಿಕೊಂಡಿದೆ. ಮಳೆ ನೀರು ಸರಾಗವಾಗಿ ಹರಿಯಲು ಕಾಲುವೆಗಳನ್ನು ನಿರ್ಮಾಣ ಮಾಡಲಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಕೆಲಸ ಆಗದೆ ಇರುವುದರಿಂದ ಮತ್ತೆ ಸಮಸ್ಯೆ ಬಿಗಾಡಿಯಿಸಿದೆ.

ADVERTISEMENT

ಕಳೆದ ವರ್ಷ ಮಳೆಯಿಂದಾಗಿ ರಾಜ ಕಾಲುವೆ ನೀರು ಬೆಳ್ಳಂದೂರು ಇಕೋಸ್ಪೇಸ್ ರಸ್ತೆ ಮೇಲೆ ನೀರು ಹರಿದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. 

ಬೆಳ್ಳಂದೂರು ಇಕೋಸ್ಪೇಸ್ ಬಳಿ ರಸ್ತೆ ಮೇಲೆ ಹರಿದ ಮಳೆ ನೀರು.
ಬೆಳ್ಳಂದೂರು ಇಕೋಸ್ಪೇಸ್ ಬಳಿ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.