ಬೆಂಗಳೂರು: ರೈಲಿನಲ್ಲಿ ದೆಹಲಿಗೆ ಸಾಗಿಸುತ್ತಿದ್ದ ನೂರಾರು ಕೋಟಿ ಮೌಲ್ಯದ ಹೆರಾಯಿನ್ ಜಪ್ತಿ ಮಾಡಲಾಗಿದ್ದು, ಈ ಸಂಬಂಧ ವಿದೇಶಿ ಪ್ರಜೆಯೊಬ್ಬರನ್ನುಕೇಂದ್ರ ತನಿಖಾ ತಂಡಗಳು ವಶಕ್ಕೆ ಪಡೆದಿವೆ.
‘ರೈಲಿನಲ್ಲಿ ಡ್ರಗ್ಸ್ ಸಾಗಣೆ ಬಗ್ಗೆ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಮಾಹಿತಿ
ನೀಡಿದ್ದರು. ಬೆಂಗಳೂರಿನ ನಿಲ್ದಾಣದಲ್ಲಿ ಎಲ್ಲ ರೈಲಿನಲ್ಲಿ ತಪಾಸಣೆ ನಡೆಸಲಾಯಿತು. ದೆಹಲಿಗೆ ಹೊರಟಿದ್ದ ರೈಲಿನಲ್ಲಿ ಹೆರಾಯಿನ್ ಪತ್ತೆಯಾಯಿತು’ ಎಂದು ರೈಲ್ವೆ ಪೊಲೀಸ್ ಮೂಲಗಳು ತಿಳಿಸಿವೆ. ‘ಟ್ರಾಲಿ ಬ್ಯಾಗ್‌ನಲ್ಲಿ ಸುಮಾರು 16 ಕೆ.ಜಿ. ಹೆರಾಯಿನ್ ಬಚ್ಚಿಟ್ಟು ಸಾಗಿಸಲಾಗುತ್ತಿತ್ತು. ಬ್ಯಾಗ್ ಜೊತೆಯೇ ಆರೋಪಿ ಇದ್ದ. ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ’ ಎಂದೂ ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.