ADVERTISEMENT

‘ಬಸ್, ಗ್ರಂಥಾಲಯ ಸೌಲಭ್ಯ ಒದಗಿಸಿ’

ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಮಕ್ಕಳ ಮನವಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 20:18 IST
Last Updated 1 ಆಗಸ್ಟ್ 2019, 20:18 IST
ವಿದ್ಯಾರ್ಥಿ ನಿಲಯ ಪರಿಶೀಲನೆ ನಡೆಸಿದ ಚೊಕ್ಕನಹಳ್ಳಿ ವೆಂಕಟೇಶ್, ರವಿಕುಮಾರ್ ಮತ್ತು ಸುಷ್ಮಾ ಮುನಿರಾಜು
ವಿದ್ಯಾರ್ಥಿ ನಿಲಯ ಪರಿಶೀಲನೆ ನಡೆಸಿದ ಚೊಕ್ಕನಹಳ್ಳಿ ವೆಂಕಟೇಶ್, ರವಿಕುಮಾರ್ ಮತ್ತು ಸುಷ್ಮಾ ಮುನಿರಾಜು   

ಹೆಸರಘಟ್ಟ: ‘ಬಸ್ ಸೌಲಭ್ಯ ಕಲ್ಪಿಸಿ, ಗ್ರಂಥಾಲಯ ನಿರ್ಮಿಸಿಕೊಡಿ’ ಎಂದುಐವರಕಂಡಪುರ ಗ್ರಾಮದಲ್ಲಿನ ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಜಿಲ್ಲಾ ಪಂಚಾಯಿತಿ ಸದಸ್ಯರಲ್ಲಿ ಮನವಿ ಮಾಡಿದರು.

ವಿದ್ಯಾರ್ಥಿ ನಿಲಯ ಪರಿಶೀಲನೆಗೆ ಬಂದಿದ್ದಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸದಸ್ಯರಾದ ಚೊಕ್ಕನಹಳ್ಳಿ ವೆಂಕಟೇಶ್, ರವಿಕುಮಾರ್, ಸುಷ್ಮಾ ಮುನಿರಾಜು ಅವರ ಬಳಿ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡರು.

‘ವಿದ್ಯಾರ್ಥಿ ನಿಲಯದಲ್ಲಿರುವ ಬಹುತೇಕ ವಿದ್ಯಾರ್ಥಿಗಳು ಕೆಂಗೇರಿ, ಮಲ್ಲೇಶ್ವರ, ನಾಗವಾರ, ಮೆಜೆಸ್ಟಿಕ್‍ನಲ್ಲಿರುವ ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಸಂಜೆ ನಂತರ ಇಲ್ಲಿಗೆ ಬಸ್ ಸೌಕರ್ಯ ಇಲ್ಲ. ಹೆಸರುಘಟ್ಟದಿಂದ ನಾಲ್ಕು ಕಿ.ಮೀ ದೂರ ನಡೆದುಕೊಂಡೇ ಬರಬೇಕು’ ಎಂದು ಹೇಳಿದರು.

ADVERTISEMENT

‘ವಿದ್ಯಾರ್ಥಿ ನಿಲಯಕ್ಕೆ ಭದ್ರತೆ ಇಲ್ಲ, ಗ್ರಂಥಾಲಯದ ಸೌಲಭ್ಯವೂ ಇಲ್ಲ. ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಗ್ರಂಥಾಲಯ ನಿರ್ಮಿಸಿಕೊಡಬೇಕು’ ಎಂದು ಕೇಳಿದರು. ‘35 ವರ್ಷ ಹಳೆಯದಾದ ಕಟ್ಟಡದಲ್ಲಿ ವಿದ್ಯಾರ್ಥಿ ನಿಲಯವಿದ್ದು, ₹32 ಲಕ್ಷ ವೆಚ್ಚದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಲಾಗುವುದು’ ಎಂದು ಚೊಕ್ಕನಹಳ್ಳಿ ವೆಂಕಟೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.