ಬೆಂಗಳೂರು: ಹೆಸರಘಟ್ಟ ಸಮೀಪ ದಾಸನಪುರ ಹೋಬಳಿಯ ಕುದುರೆಗೆರೆ ಗ್ರಾಮದ ನಾರಾಯಣಧಾಮದಲ್ಲಿ ಲೂಯಿ ಬ್ರೈಲ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಅಂಧ ಮಕ್ಕಳಿಂದ ಗೀತಗಾಯನ ನಡೆಯಿತು.
ರಾಮನಗರ ತಾಲ್ಲೂಕಿನ ಅರ್ಚಕರಹಳ್ಳಿ ಗ್ರಾಮದ ಅಂಧ ಮಕ್ಕಳು ಮತ್ತು ಕುದುರೆಗೆರೆ ಗ್ರಾಮದ ನಾರಾಯಣಧಾಮದಲ್ಲಿರುವ ಅಂಧ ಮಕ್ಕಳು ಭಕ್ತಿಗೀತೆಗಳನ್ನು ಸಾದರಪಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಮಚಂದ್ರಪ್ಪ ಮೈತ್ರಿ ಅವರು ‘ಲೂಯಿ ಬ್ರೈಲ್ ಚಿಕ್ಕ ವಯಸ್ಸಿನಲ್ಲಿಯೇ ಗರಗಸದ ಕೆಲಸ ಮಾಡುವಾಗ ಕಣ್ಣು ಕಳೆದುಕೊಂಡರು. ನಂತರ ತನ್ನಂತಹ ಕಣ್ಣು ಇಲ್ಲದವರಿಗೆ ಮಾದರಿಯಾಗುವ ರೀತಿ ಬದುಕಿದರು. ಅವರ ಸಾಧನೆ ನಮಗೆಲ್ಲರಿಗೂ ಸ್ಫೂರ್ತಿದಾಯಕ’ ಎಂದರು.
ಸಾಯಿ ಕೀರ್ತಿನಾಥ್ ಸ್ವಾಮೀಜಿ ಮಾತನಾಡಿ, ‘ಲೂಯಿ ಬ್ರೈಲ್ ಅವರು ಇಡೀ ಜಗತ್ತು ಸ್ಮರಿಸುವ ಲಿಪಿಯನ್ನು ಕಂಡು ಹಿಡಿದರು. ಅವರು ಕಂಡು ಹಿಡಿದ ಈ ಲಿಪಿಯಿಂದ ಎಷ್ಟೋ ಅಂಧ ಮಕ್ಕಳು ಓದುವ ಭಾಗ್ಯವನ್ನು ಪಡೆದುಕೊಂಡರು’ ಎಂದರು. ಗುರುನಾಥ ಮಹಾರಾಜ್ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.