ADVERTISEMENT

ಹೆಸರಘಟ್ಟದ ಕೆರೆಯಲ್ಲಿ ವಿಜೃಂಭಣೆಯ ತೆಪ್ಪೋತ್ಸವ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 19:13 IST
Last Updated 14 ಅಕ್ಟೋಬರ್ 2024, 19:13 IST
ಹೆಸರಘಟ್ಟ ಕೆರೆಯಲ್ಲಿ ದುಗ್ಗಲಮ್ಮ ದೇವಿಯ ತೆಪ್ಪೋತ್ಸವ ಭಾನುವಾರ ನಡೆಯಿತು
ಹೆಸರಘಟ್ಟ ಕೆರೆಯಲ್ಲಿ ದುಗ್ಗಲಮ್ಮ ದೇವಿಯ ತೆಪ್ಪೋತ್ಸವ ಭಾನುವಾರ ನಡೆಯಿತು   

ಹೆಸರಘಟ್ಟ: ಇಲ್ಲಿನ ‌ಕೆರೆಯಲ್ಲಿ ದುಗ್ಗಲಮ್ಮ ದೇವಿಯ ತೆಪ್ಪೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು. ತೆಪ್ಪೋತ್ಸವ ನಿಮಿತ್ತ ಮಂಟಪವನ್ನು ಹೂಗಳಿಂದ ಅಲಂಕರಿಸಿ, ದೇವಿ ಮೂರ್ತಿ ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು.

ಆ ನಂತರ ಹೆಸರಘಟ್ಟ ಕೆರೆಯಲ್ಲಿ ತೆಪ್ಪೋತ್ಸವ ಸಾಗಿತು. ಕೆರೆಯಲ್ಲಿ ನೀರು ಇದ್ದಾಗ ಮಾತ್ರ ವಿಜಯದಶಮಿ ಹಬ್ಬದಂದು ತೆಪ್ಪೋತ್ಸವವನ್ನು ನೆರವೇರಿಸಲಾಗುತ್ತದೆ.

ಕಾರ್ಯಕ್ರಮದ ಪ್ರಯುಕ್ತ ದುಗ್ಗಲಮ್ಮ ದೇವಿ ದೇವಾಲಯವನ್ನು ಹೂ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಸುತ್ತಮುತ್ತಲಿನ ಗ್ರಾಮಸ್ಥರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ತೆಪ್ಪೋತ್ಸವವನ್ನು ಕಣ್ತುಂಬಿಕೊಂಡರು. 

ADVERTISEMENT

ಮೂರು ವರ್ಷಗಳಿಂದ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿದ್ದು ಉತ್ಸವ ನಿರಂತರವಾಗಿ ನಡೆದುಕೊಂಡು ಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.