ADVERTISEMENT

ಜಕ್ಕೂರು ಏರೋಡ್ರೋಮ್‌ ಬಳಿ ಮೆಟ್ರೊ ಮಾರ್ಗಕ್ಕೆ ಹೈಕೋರ್ಟ್ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 21:09 IST
Last Updated 29 ಸೆಪ್ಟೆಂಬರ್ 2020, 21:09 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಜಕ್ಕೂರು ಏರೋಡ್ರೋಮ್ ಪಶ್ಚಿಮ ಭಾಗದಲ್ಲಿ ಎತ್ತರಿಸಿದ ಮೆಟ್ರೊ ರೈಲು ಮಾರ್ಗ ಮತ್ತು ಇತರೆ ಯಾವುದೇ ನಿರ್ಮಾಣ ಚಟುವಟಿಕೆ ನಡೆಸದಂತೆ ಹೈಕೋರ್ಟ್‌ ಮಧ್ಯಂತರ ಆದೇಶ ಹೊಡಿಸಿದೆ.

ನಿಷೇಧಿತ ವಲಯದಲ್ಲಿ ಯಾವುದೇ ನಿರ್ಮಾಣ ಮಾಡುವಂತಿಲ್ಲ ಎಂದು ವಕೀಲ ಅಜಯಕುಮಾರ್ ಪಾಟೀಲ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡಸಿತು.

‘1934ರ ಏರ್‌ಕ್ರಾಫ್ಟ್ ಕಾಯ್ದೆ ಪ್ರಕಾರ, ಕಾಮಗಾರಿ ನಿರ್ವಹಿಸುವ ಮೊದಲೇ ಏರೋಡ್ರೋಮ್‌ನಿಂದ ಎನ್‌ಒಸಿ ಪಡೆಯಬೇಕು. ರನ್‌ವೇಯಿಂದ 60 ಮೀಟರ್ ಅಂತರದಲ್ಲಿ ಯಾವುದೇ ನಿರ್ಮಾಣ ಕಾರ್ಯ ಮಾಡುವಂತಿಲ್ಲ. ಪ್ರಸ್ತಾವಿತ ಮೆಟ್ರೊ ಮಾರ್ಗ ಈ ನಿಷೇಧಿತ ವಲಯದಲ್ಲೇ ಬರಲಿದೆ’ ಎಂದು ಅರ್ಜಿದಾರರು ಹೇಳಿದ್ದಾರೆ.

ADVERTISEMENT

‘2013ರಲ್ಲಿ ನಿರ್ಮಾಣವಾಗಿರುವ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಗೂ ಈ ನಿಯಮ ಉಲ್ಲಂಘಿಸಲಾಗಿದೆ. ಏರೋಡ್ರೋಮ್ ಜಾಗ ಒತ್ತುವರಿ ಮಾಡಲು ಕೆಲವರು ಪ್ರಯತ್ನಿಸಿದ್ದರು. ಅತ್ಯಂತ ಹಳೆಯದಾದ ಮತ್ತು ಬಡ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುತ್ತಿರುವ ಏರೋಡ್ರೋಮ್‌ ಉಳಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.