ಬೆಂಗಳೂರು: ವೃಷಭಾವತಿ ನದಿ ಮಲೀನ ತಪ್ಪಿಸಿ ಪುನರುಜ್ಜೀವನಗೊಳಿಸುವ ಸಂಬಂಧ ಕ್ರಮಗಳನ್ನು ಸೂಚಿಸಲು ನ್ಯಾಷನಲ್ ಎನ್ವಿರಾನ್‌ಮೆಂಟಲ್ ಎಂಜಿನಿಯರಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಎನ್‌ಇಇಆರ್‌ಐ) ರೀತಿಯ ಸಂಸ್ಥೆಯನ್ನು ನೇಮಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ವಕೀಲರಾದ ಗೀತಾ ಮಿಶ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ, ‘ವೃಷಭಾವತಿ ನದಿ ಪುನರುಜ್ಜೀವನಗೊಳಿಸುವುದು ರಾಜ್ಯ ಸರ್ಕಾರದ್ದೇ ಜವಾಬ್ದಾರಿ. ಅದನ್ನು ಬಿಬಿಎಂಪಿ ಅಥವಾ ಜಲಮಂಡಳಿಗೆ ಬಿಡಬಾರದು’ ಎಂದು ಅಭಿಪ್ರಾಯಪಟ್ಟಿತು.
‘ಎನ್‌ಇಇಆರ್‌ಐ ರೀತಿಯ ಸಂಸ್ಥೆಯ ಮೇಲ್ವಿಚಾರಣೆ ಇದ್ದರೆ ನದಿ ಪುನರಜ್ಜೀವನಗೊಳ್ಳಲಿದೆ. ಸಂಸ್ಥೆಯನ್ನು ನೇಮಿಸಲು ರಾಜ್ಯ ಸರ್ಕಾರ ಮತ್ತು ಇತರ ಸಂಸ್ಥೆಗಳು ಸಿದ್ಧರಿಲ್ಲದಿದ್ದರೂ ನ್ಯಾಯಾಲಯ ಈ ವಿಷಯ ಪ್ರಸ್ತಾಪಿಸಿ ಆದೇಶಿಸುತ್ತಿದೆ’ ಎಂದು ಪೀಠ ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.