ಹೈಕೋರ್ಟ್‌ನ ಮಹತ್ವದ ಆದೇಶ– ತೀರ್ಪು
ಜನವರಿ: ಆದೇಶ ರದ್ದು:2014ರಲ್ಲಿ ನಗರದ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುತ್ತಿಗೆ ನೌಕರನೊಬ್ಬ ಮ್ಯಾನ್‌ಹೋಲ್‌ಗೆ ಬಿದ್ದು ಸಾವನ್ನಪ್ಪಿದ ಪ್ರಕರಣದಲ್ಲಿ ₹10 ಲಕ್ಷ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸುವಂತೆ ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶವನ್ನು ವಿಭಾಗೀಯ ಪೀಠ ರದ್ದುಗೊಳಿಸಿತು.
ಫೆಬ್ರುವರಿ: ಸ್ವಾಮೀಜಿ ನಿರಾಳ:ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2014ರಲ್ಲಿ ನಡೆದ ಕೋಮು ಗಲಭೆ ಪ್ರಕರಣ ಸಂಬಂಧ ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿತು.
ಮಾರ್ಚ್: ತೆರವು ಕಾರ್ಯಾಚರಣೆ:ಹೈಕೋರ್ಟ್ ಆದೇಶದಂತೆ ಕೆ.ಆರ್. ಮಾರುಕಟ್ಟೆ ಸಂಕೀರ್ಣದಲ್ಲಿ ಅಕ್ರಮ ಮಳಿಗೆಗಳ ತೆರವು ಕಾರ್ಯಾಚರಣೆ ನಡೆಸಿದ ಬಿಬಿಎಂಪಿ.
ಜೂನ್: ಐಎಂಎ ಹಗರಣ: ಬಹುಕೋಟಿ ಐಎಂಎ ವಂಚನೆಗೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ಸಾವಿರಾರು ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಆರೋಪದಡಿ ಸಂಸ್ಥೆ ವಿರುದ್ಧದ ತನಿಖೆಯನ್ನು ಸಿಬಿಐಗೆ ವಹಿಸಲು ಕೋರಿ ಹಲವು ಪಿಐಎಲ್ ಸಲ್ಲಿಕೆ.
ಜುಲೈ: ಆನೆ ಸಾವು:ರಾಜ್ಯದ ಎಂಟು ಆನೆ ಶಿಬಿರಗಳಲ್ಲಿ 11 ಆನೆಗಳ ಸಾವು- ಸರ್ಕಾರದಿಂದ ಪ್ರಮಾಣ ಪತ್ರ ಸಲ್ಲಿಕೆ. ಪ್ರಕರಣದ ಸಮಗ್ರ ಅಧ್ಯಯನಕ್ಕೆ ಮೂವರು ತಜ್ಞರ ಹೊಸ ಸಮಿತಿ ರಚನೆಗೆ ಅನುಮತಿ.
ಆಗಸ್ಟ್: ಡಿಕೆಶಿ ಅರ್ಜಿ ವಜಾ:ನವದೆಹಲಿಯ ನಿವಾಸಗಳಲ್ಲಿ ಲೆಕ್ಕವಿಲ್ಲದ ₹ 8.6 ಕೋಟಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ರದ್ದು ಕೋರಿ ಕಾಂಗ್ರೆಸ್ ಶಾಸಕಡಿ.ಕೆ. ಶಿವಕುಮಾರ್ ಮತ್ತವರ ಆಪ್ತರು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ ಏಕಸದಸ್ಯ ನ್ಯಾಯಪೀಠ.
ಸೆಪ್ಟೆಂಬರ್: 9 ನ್ಯಾಯಮೂರ್ತಿಗಳ ನೇಮಕ:ಸಿಂಗಾಪುರಂ ರಾಘವಾಚಾರ್ ಕೃಷ್ಣಕುಮಾರ್, ಅಶೋಕ್ ಸುಭಾಷ್‌ಚಂದ್ರ ಕಿಣಗಿ, ಸೂರಜ್ ಗೋವಿಂದರಾಜ್ ಮತ್ತು ಸಚಿನ್ ಶಂಕರ್ ಮಗದುಂ, ಎನ್.ಎಸ್. ಸಂಜಯ ಗೌಡ, ಜ್ಯೋತಿ ಮೂಲಿಮನಿ, ಆರ್.ನಟರಾಜ್, ಹೇಮಂತ್ ಚಂದನಗೌಡರ್ ಹಾಗೂ ಪ್ರದೀಪ್ ಸಿಂಗ್ ಯೆರೂರು.
ಅಕ್ಟೋಬರ್: ಪರಿಹಾರಕ್ಕೆ ಆದೇಶ: ರಸ್ತೆ ಗುಂಡಿಗಳಿಂದ ಸಂಭವಿಸುವ ಅಪಘಾತಗಳಲ್ಲಿ ಗಾಯಗೊಂಡವರಿಗೆ ಪರಿಹಾರ ನೀಡುವಂತೆ ಬಿಬಿಎಂಪಿಗೆ ಆದೇಶ
ಆದೇಶ ರದ್ದು:ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರನ್ನು ಐಪಿಸಿ ಕಲಂ 409ರ ಅಡಿ ಆರೋಪಗಳಿಂದ ಮುಕ್ತಗೊಳಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶ ರದ್ದು.
ವಿಚಾರಣೆಗೆ ತಡೆ ಇಲ್ಲ:ಹಲಗೆವಡೇರಹಳ್ಳಿ 3 ಎಕರೆ 34 ಗುಂಟೆ ಪ್ರದೇಶವನ್ನು ಅಕ್ರಮವಾಗಿ ಡಿನೋಟಿಫೈ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿನ ವಿಚಾರಣೆಗೆ ತಡೆ ನೀಡುವಂತೆ ಕೋರಿದ್ದ ಜೆಡಿಎಸ್ ಶಾಸಕ ಎಚ್.ಡಿ.ಕುಮಾರಸ್ವಾಮಿ ಮನವಿ ತಿರಸ್ಕಾರ.
ನವೆಂಬರ್: ಹೆದ್ದಾರಿ ವಿಸ್ತರಣೆಗೆತಡೆ: ವನ್ಯಜೀವಿ ಮಂಡಳಿ ಅನುಮತಿಯಿಲ್ಲದೆ ದಾಂಡೇಲಿಯ ಪಶ್ಚಿಮ ಘಟ್ಟ ಅರಣ್ಯದ ಮೂಲಕ ಹಾದು ಹೋಗುವ ಬೆಳಗಾವಿ-ಗೋವಾ ನಡುವಿನ ರಾಷ್ಟ್ರೀಯ ಹೆದ್ದಾರಿ 4–ಎ ವಿಸ್ತರಣೆಗೆ ಮಧ್ಯಂತರ ತಡೆ.
ಜೈಲು ಶಿಕ್ಷೆ:ಮಾನನಷ್ಟ ಮೊಕದ್ದಮೆಯಲ್ಲಿ ಆರೋಪಿಯಾಗಿದ್ದ ಮಾಹಿತಿ ಹಕ್ಕು ಕಾರ್ಯಕರ್ತ ಹನುಮೇಗೌಡ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರು ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದರು.
ಡಿಸೆಂಬರ್: ಟೋಲ್ ಸಂಗ್ರಹಕ್ಕೆ ತಡೆ:ಬೆಂಗಳೂರು-ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಮಾಡದಂತೆ ಸರ್ಕಾರ ಮತ್ತು ಯಲಹಂಕ ಎಪಿ ಬಾರ್ಡರ್ ಟೋಲ್ ಹೈವೇಸ್ ಕಂಪನಿಗೆ ಮಧ್ಯಂತರ ಆದೇಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.