ಬೆಂಗಳೂರು: 2023ರ ವಿಧಾನಸಭೆ ಚುನಾವಣೆಯಲ್ಲಿ ಹಿಂದೂ ಸಂಘಟನೆಗಳ ಹೋರಾಟಗಾರರಿಗೆ 25 ಸ್ಥಾನ ಗಳನ್ನುಬಿಜೆಪಿ ಮೀಸಲಿಡಬೇಕು ಎಂದು ಮಠಾಧಿಪತಿಗಳು ಮತ್ತು ಹಿಂದೂ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
‘ಬಿಜೆಪಿಯಲ್ಲಿ ಕಟ್ಟರ್ ಹಿಂದುತ್ವವಾದಿಗಳ ಸಂಖ್ಯೆ ಕಡಿಮೆಯಾಗಿದೆ. ಆದ್ದರಿಂದ ಹಿಂದುತ್ವ ತತ್ವ ಸಿದ್ಧಾಂತ ಪ್ರತಿಪಾದಿಸುವ ಹೊಸ ಮುಖಗಳಿಗೆ ಅವಕಾಶ ನೀಡಬೇಕು’ ಎಂದು ಧಾರವಾಡದ ಸರ್ವತತ್ವ ಸಮನ್ವಯ ಪರಮಾತ್ಮ ಪೀಠದ ಪರಮಾತ್ಮನಂದ ಸ್ವಾಮೀಜಿಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
‘ಹಿಂದೂ ಸಮುದಾಯದ ಮೇಲೆಸತತವಾಗಿ ನಡೆಯುತ್ತಿರುವ ಹಲ್ಲೆ, ಸರಣಿ ಕೊಲೆಗಳಿಂದ ಸಮಾಜ ರೋಸಿಹೋಗಿದೆ. ಹಿಂದೂಗಳಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ. ಬಿಜೆಪಿಯ ರಾಜ್ಯ ನಾಯಕರಲ್ಲಿ ಒಂದಿಬ್ಬರನ್ನು ಬಿಟ್ಟರೆ ಹಿಂದುತ್ವದ ಪರವಾಗಿ ಯಾರೂ ಧ್ವನಿ ಎತ್ತುತ್ತಿಲ್ಲ’ ಎಂದರು.
‘ಹಿಂದೂ ಕಾರ್ಯಕರ್ತರು ಬೆವರು ಸುರಿಸಿ ಬಿಜೆಪಿ ಕಟ್ಟಿದ್ದಾರೆ. ನಾಲ್ಕು ಹೆಗ್ಗಣಗಳು ಸೇರಿ ಅದಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅದನ್ನು ಸಹಿಸಲಾಗದು’ ಎಂದರು.
‘ಹಿಂದೂಗಳಿಗೆ ನ್ಯಾಯ ಒದಗಿ ಸಲೆಂದೇ 50ಕ್ಕೂ ಹೆಚ್ಚು ಮಠಾಧೀಶರು ಮತ್ತು ಹಿಂದೂ ಪರ ಸಂಘಟನೆಗಳು ಚರ್ಚಿಸಿ ಈ ಒಕ್ಕೂಟವನ್ನು ರಚಿಸ ಲಾಗಿದೆ. ಮೀಸಲಾತಿ ನೀಡುವಂತೆ ರಾಜ್ಯ ಮತ್ತು ಕೇಂದ್ರ ಬಿಜೆಪಿ ಮುಖಂಡರಿಗೆ ಮನವಿ ಸಲ್ಲಿಸಿ, ವಿಜಯ ದಶಮಿಯವರೆಗೂ ಕಾದು ನೋಡುತ್ತೇವೆ’ ಎಂದು ಮಠಾಧೀಶರ ಧರ್ಮ ಪರಿಷತ್ ರಾಜ್ಯ ಕಾರ್ಯದರ್ಶಿ ಅಭಿನವ ಹಾಲಸ್ವಾಮೀಜಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.