ADVERTISEMENT

ಎಚ್‌ಎಂಟಿ: ಐದು ಎಕರೆ ಭೂಮಿ ಅರಣ್ಯ ಇಲಾಖೆಯಿಂದ ಮರು ವಶ

ಎಚ್‌ಎಂಟಿ: ಜಮೀನಿನ ಮೌಲ್ಯ ₹160 ಕೋಟಿ l ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 0:17 IST
Last Updated 26 ಅಕ್ಟೋಬರ್ 2024, 0:17 IST
<div class="paragraphs"><p>ಎಚ್‌ಎಂಟಿ ಆವರಣದಲ್ಲಿದ್ದ ಐದು ಎಕರೆ ಜಮೀನನ್ನು ಮರುವಶಕ್ಕೆ ಪಡೆದು, ಅರಣ್ಯ ಇಲಾಖೆ ಫಲಕ ಹಾಕಿದೆ</p></div>

ಎಚ್‌ಎಂಟಿ ಆವರಣದಲ್ಲಿದ್ದ ಐದು ಎಕರೆ ಜಮೀನನ್ನು ಮರುವಶಕ್ಕೆ ಪಡೆದು, ಅರಣ್ಯ ಇಲಾಖೆ ಫಲಕ ಹಾಕಿದೆ

   

ಬೆಂಗಳೂರು: ನಗರದ ಎಚ್ಎಂಟಿ ಕ್ಯಾಂಪಸ್‌ನಲ್ಲಿರುವ ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಕೇಂದ್ರ
ಬೃಹತ್ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮತ್ತು ರಾಜ್ಯ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ನಡುವೆ ಜಟಾಜಟಿ ನಡೆಯುತ್ತಿರುವ ಹೊತ್ತಿನಲ್ಲೇ, ಕಂಪನಿ ವಶದಲ್ಲಿದ್ದ ಐದು ಎಕರೆಯನ್ನು ಅರಣ್ಯ ಇಲಾಖೆಯು ಶುಕ್ರವಾರ ತನ್ನ ವಶಕ್ಕೆ ಪಡೆದುಕೊಂಡಿದೆ.

ಎಚ್‌ಎಂಟಿ ವಶದಲ್ಲಿದ್ದ ಪೀಣ್ಯ- ಜಾಲಹಳ್ಳಿ ಸರ್ವೆ ನಂ.1ರ ಪೀಣ್ಯ ಪ್ಲಾಂಟೇಷನ್‌ನ ₹160 ಕೋಟಿ ಮೌಲ್ಯದ ಐದು ಎಕರೆ ಜಮೀನನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದರು. ಜಮೀನಿನಲ್ಲಾಗಿದ್ದ ಕೆಲ ಒತ್ತುವರಿಗಳನ್ನು ತೆರವು ಮಾಡಿ, ಅರಣ್ಯ ಇಲಾಖೆಯ ಸ್ವತ್ತು ಎಂದು ಫಲಕ ಹಾಕಿದ್ದಾರೆ. 

ADVERTISEMENT

‘1896, 1901 ಅಧಿಸೂಚನೆಗಳ ಪ್ರಕಾರ ಸದರಿ ಪ್ರದೇಶವನ್ನು ಅರಣ್ಯ ಎಂದು ಘೋಷಿಸಲಾಗಿದ್ದು, ಭೂಪರಿವರ್ತನೆ ಮಾಡಿಕೊಳ್ಳದೆ ಅರಣ್ಯೇತರ ಉದ್ದೇಶಕ್ಕೆ ಈ ಜಮೀನನ್ನು ಬಳಸಿಕೊಳ್ಳು
ವಂತಿಲ್ಲ. ಈ ಜಮೀನು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಡಿನೋಟಿಫೈ ಮಾಡಲು ಅನುಮತಿ ಕೋರಿ ಈ ಹಿಂದೆ ಅರಣ್ಯಾಧಿಕಾರಿಗಳು ನಿಯಮ ಬಾಹಿರವಾಗಿ ಇಂಟರ್‌ಲೊಕೇಟರಿ ಅಪ್ಲಿಕೇಷನ್‌ (ಐ.ಎ) ಸಲ್ಲಿಸಿದ್ದರು. ಈ ಅರ್ಜಿಯನ್ನು ಹಿಂಪಡೆಯುವಂತೆ ಸಚಿವರು ಸೂಚಿಸಿದ್ದರು’ ಎಂದು ಅರಣ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

ಎಚ್‌ಎಂಟಿ ಕ್ಯಾಂಪಸ್‌ನಲ್ಲಿ ಬಳಕೆ ಮಾಡದ ಅರಣ್ಯ ಪ್ರದೇಶವನ್ನು ವಾಪಸ್‌ ಪಡೆದು, ಅಲ್ಲಿ ಕಬ್ಬನ್‌ ಉದ್ಯಾನ ಮತ್ತು ಲಾಲ್‌ಬಾಗ್‌ನಂತಹ ವೃಕ್ಷೋದ್ಯಾನ ನಿರ್ಮಿಸುವುದಾಗಿ ಈಶ್ವರ ಬಿ.ಖಂಡ್ರೆ ಹೇಳಿದ್ದರು.

ಎಚ್‌ಎಂಟಿ ವಶದಲ್ಲಿರುವ ಯಾವ ಪ್ರದೇಶವನ್ನೂ ಬಿಟ್ಟುಕೊಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದರು. ಆನಂತರ ಎಚ್‌ಎಂಟಿ ಕಾರ್ಖಾನೆಯ ವಿವಿಧ ವಿಭಾಗಗಳಿಗೆ ಹಲವು ಬಾರಿ ಭೇಟಿ ನೀಡಿ, ಕಾರ್ಖಾನೆ ಪುನಶ್ಚೇತನದ ಬಗ್ಗೆ ಅಧಿಕಾರಿಗಳು ಮತ್ತು ನೌಕರರ ಜತೆಗೆ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.

108 ಎಕರೆ ಅರಣ್ಯ ಮರುವಶ: ಅರಣ್ಯ ಇಲಾಖೆಯು ಒಂದು ವರ್ಷದಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 108 ಎಕರೆ ಅರಣ್ಯ ಜಮೀನಿನ ಒತ್ತುವರಿ ತೆರವು ಮಾಡಿ, ಮರುವಶಕ್ಕೆ ಪಡೆದಿದೆ. ಈ ಪ್ರದೇಶದಲ್ಲಿ ಸಸಿಗಳನ್ನು ನೆಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.