ADVERTISEMENT

ನೆಲಮಂಗಲ: ಕುರುಬ ಸಮುದಾಯ ವಿದ್ಯಾರ್ಥಿನಿಲಯ ಶೀಘ್ರ– ಶಾಸಕ ಶ್ರೀನಿವಾಸ್

’ಕನಕದಾಸ ಜಯಂತಿ’ಯಲ್ಲಿ ಶಾಸಕ ಶ್ರೀನಿವಾಸ್

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2024, 16:02 IST
Last Updated 18 ನವೆಂಬರ್ 2024, 16:02 IST
<div class="paragraphs"><p>ಸಾಧಕರಾದ (ಕುಳಿತವರು) ನಗರಸಭೆ ಸದಸ್ಯ ಎನ್‌.ಎಂ.ಚೇತನ್‌, ವಿಖ್ಯಾತ್‌ - ಜ್ಯೋತಿಷ್ಯ, ರೈತ ಗಂಗಕಾಳಯ್ಯ, ಕಲಾವಿದ ಬಿ.ಕೆಂಚಪ್ಪ, ನಾರಾಯಣಗೌಡ - ಶಿಕ್ಷಣ ಅವರನ್ನು ಶಾಸಕ ಎನ್‌.ಶ್ರೀನಿವಾಸ್‌ (ಮೂರನೆಯವರು) ಗೌರವಿಸಿದರು. </p></div>

ಸಾಧಕರಾದ (ಕುಳಿತವರು) ನಗರಸಭೆ ಸದಸ್ಯ ಎನ್‌.ಎಂ.ಚೇತನ್‌, ವಿಖ್ಯಾತ್‌ - ಜ್ಯೋತಿಷ್ಯ, ರೈತ ಗಂಗಕಾಳಯ್ಯ, ಕಲಾವಿದ ಬಿ.ಕೆಂಚಪ್ಪ, ನಾರಾಯಣಗೌಡ - ಶಿಕ್ಷಣ ಅವರನ್ನು ಶಾಸಕ ಎನ್‌.ಶ್ರೀನಿವಾಸ್‌ (ಮೂರನೆಯವರು) ಗೌರವಿಸಿದರು.

   

ನೆಲಮಂಗಲ: ‘ಪಟ್ಟಣದಲ್ಲಿ ಕುರುಬ ಸಮುದಾಯ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಮುಖ್ಯಮಂತ್ರಿಯವರು ₹1 ಕೋಟಿ ಬಿಡುಗಡೆ ಮಾಡಿದ್ದಾರೆ. ಕಟ್ಟಡದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ’ ಎಂದು ಶಾಸಕ ಎನ್‌.ಶ್ರೀನಿವಾಸ್‌  ತಿಳಿಸಿದರು.‌

ಪಟ್ಟಣದಲ್ಲಿ ಸೋಮವಾರ ನಡೆದ ‘ಕನಕದಾಸ ಜಯಂತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ADVERTISEMENT

’ತಾಲ್ಲೂಕಿನ ಬ್ಯಾಡರಹಳ್ಳಿಯ ಸಮೀಪ ಕನಕ ಭವನ ಹಾಗೂ ಅಂಗವಿಕಲರ ಶಾಲೆ ನಿರ್ಮಾಣಕ್ಕೆ ಒಂದು ಎಕರೆ ಐದು ಗುಂಟೆ ಜಾಗ ಮಂಜೂರಾಗಿದೆ.ಭವನ  ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಹಾಗೂ ವೈಯಕ್ತಿಕವಾಗಿ ಸಹಕಾರ ನೀಡುತ್ತೇನೆ’ ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ‌ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಹೊನ್ನಸಿದ್ದಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಡಿ.ಗಂಗರಾಜು ಕನಕ ಭವನ ನಿರ್ಮಾಣಕ್ಕೆ ಸರ್ಕಾರದ ಅನುದಾನ ಕೋರಿ ಮನವಿ ಪತ್ರ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕುರುಬ ಸಮಾಜದ ಸಾಧಕರಿಗೆ ಗೌರವಿಸಲಾಯಿತು. ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿ ವರೆಗೆ ಕನಕದಾಸರ ಭಾವಚಿತ್ರವನ್ನು ಜಾನಪದ ಕಲಾ ಪ್ರಕಾರಗಳೊಂದಿಗೆ ಮೆರವಣಿಗೆ ಮಾಡಲಾಯಿತು.

ತಹಶೀಲ್ದಾರ್‌ ಅಮೃತ್‌ ಅತ್ರೇಶ್‌, ನಗರಸಭೆ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ನಾರಾಯಣಗೌಡ, ಮುಖಂಡರಾದ ಚಿಕ್ಕನಾಗಯ್ಯ, ಕೆ.ನಾಗರಾಜು, ಕೇಶವಮೂರ್ತಿ, ಎಸ್‌.ಮುನಿರಾಜು, ಕನ್ನಡ ಸಾಂಸ್ಕೃತಿಕ ರಂಗದ ಅಧ್ಯಕ್ಷ ಡಿ.ಸಿದ್ದರಾಜು, ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಎಂ.ಕೆ.ನಾಗರಾಜು, ಕನಕ ಸಹಕಾರಿ ಸಂಘದ ಅಧ್ಯಕ್ಷ ಬಿ.ಎಸ್‌.ಲೋಕೇಶ್‌ ಭಾಗವಹಿಸಿದ್ದರು.

’ಬಿಜೆಪಿ ಆಮಿಷ ನಡೆಯಲ್ಲ’

‘ಆಪರೇಷನ್‌ ಮಾಡುತ್ತಿದ್ದವರೇ ಈಗ ಕಾಂಗ್ರೆಸ್‌ ಸೇರಿದ್ದಾರೆ. ಬಿಜೆಪಿಯವರು ನಮ್ಮ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ. ಎಲ್ಲ ಪಕ್ಷದ ಶಾಸಕರು ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಯವರೊಂದಿಗೆ ಗಟ್ಟಿಯಾಗಿ ನಿಂತಿದ್ದೇವೆ’ ಎಂದು ಶಾಸಕ ಎನ್‌.ಶ್ರೀನಿವಾಸ್‌ ತಿಳಿಸಿದರು. ವೇದಿಕೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಬಿಜೆಪಿಯವರು ನಮ್ಮ ಶಾಸಕರಿಗೆ ಆಸೆ ಅಧಿಕಾರದ ಆಮಿಷಗಳನ್ನು ತೋರಿಸುತ್ತಿದ್ದಾರೆ. ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.