ADVERTISEMENT

ಬಿಬಿಎಂಪಿ: ಗೌರವ್ ಗುಪ್ತಾಗೆ ಅಧಿಕಾರ ದಂಡ ಹಸ್ತಾಂತರಿಸಿದ ಮಂಜುನಾಥ್ ಪ್ರಸಾದ್

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 4:40 IST
Last Updated 1 ಏಪ್ರಿಲ್ 2021, 4:40 IST
ಗೌರವ್ ಗುಪ್ತಾಗೆ ಅಧಿಕಾರ ದಂಡ ಹಸ್ತಾಂತರಿಸಿದ ಮಂಜುನಾಥ್ ಪ್ರಸಾದ್
ಗೌರವ್ ಗುಪ್ತಾಗೆ ಅಧಿಕಾರ ದಂಡ ಹಸ್ತಾಂತರಿಸಿದ ಮಂಜುನಾಥ್ ಪ್ರಸಾದ್   

ಬೆಂಗಳೂರು: ಬಿಬಿಎಂಪಿ ಆಡಳಿತಾಧಿಕಾರಿ ಹುದ್ದೆಯಲ್ಲಿದ್ದ ಗೌರವ್‌ ಗುಪ್ತಾ ಅವರನ್ನು ಹೊಸದಾಗಿ ಸೃಜಿಸಲಾಗಿರುವ ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನೇಮಿಸಲಾಗಿದೆ. ಗುರುವಾರ ಗೌರವ್‌ ಗುಪ್ತಾ ಅಧಿಕಾರ ಸ್ವೀಕರಿಸಿದರು.

ಗೌರವ್ ಗುಪ್ತಾ ಅವರಿಗೆ ನಿರ್ಗಮಿತ ಆಯುಕ್ತ ಮಂಜುನಾಥ್ ಪ್ರಸಾದ್ ಅಧಿಕಾರ ದಂಡ ಹಸ್ತಾಂತರಿಸಿದರು.

ಬಿಬಿಎಂಪಿ ಆಯುಕ್ತರಾಗಿದ್ದ ಎನ್‌.ಮಂಜುನಾಥ್‌ ಪ್ರಸಾದ್‌ ಅವರನ್ನು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಅವರು ಇದೇ ಹುದ್ದೆಯಲ್ಲಿದ್ದರು.

ADVERTISEMENT
ನೂತನ ಬಿಬಿಎಂಪಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಗೌರವ್ ಗುಪ್ತಾ(ಎಡ)

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನೂ ಗುಪ್ತಾ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ.

ಬಿಬಿಎಂಪಿ ಆಡಳಿತಾಧಿಕಾರಿ ಹುದ್ದೆಗೆ ಹಿರಿಯ ಐಎಎಸ್‌ ಅಧಿಕಾರಿ ರಾಕೇಶ್‌ ಸಿಂಗ್‌ ಅವರನ್ನು ನಿಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.