ಬೆಂಗಳೂರು: ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬ್ರಿಗೇಡ್ ಸಮೂಹದ ಮನೆ ಖರೀದಿಸಬೇಕೆಂದು ಕನಸು ಹೊಂದಿರುವವರಿಗೆ ಬ್ರಿಗೇಡ್ ಪ್ಲಸ್ ಈಸಿ ಹೋಮ್ ಪ್ಯಾಕೇಜ್‌ಗಳನ್ನು ಅನಾವರಣಗೊಳಿಸಿದೆ.
ಬ್ರಿಗೇಡ್ ಮನೆಗಳಲ್ಲಿ ಪ್ರತಿಷ್ಠಿತ ಐಕೆಇಎ ಸಂಸ್ಥೆ ಸಿದ್ಧಪಡಿಸಿದ ಪೀಠೋಪಕರಣಗಳು ಇರಲಿವೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಐಕೆಇಎ ತನ್ನ ಚಿಲ್ಲರೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, 7,500 ಕ್ಕೂ ಹೆಚ್ಚು ಉತ್ಪನ್ನಗಳನ್ನು ಭಾರತೀಯ ಗ್ರಾಹಕರಿಗೆ ಪರಿಚಯಿಸಿದೆ. ಬ್ರಿಗೇಡ್ ಮನೆಗಳ ಅಡುಗೆ ಕೋಣೆ, ಮಕ್ಕಳ ಕೊಠಡಿ, ಸ್ನಾನದ ಕೊಠಡಿ, ಮಲಗುವ ಕೋಣೆ ಸೇರಿದಂತೆ ವಿವಿಧ ಕೊಠಡಿಗಳಲ್ಲಿ ಐಕೆಇಎ ಪೀಠೋಪಕ ರಣದಿಂದ ಅಲಂಕರಿಸಲಾಗುತ್ತದೆ.
ನಗರದಲ್ಲಿನ ಬ್ರಿಗೇಡ್ ಇಐ ಡೊರಾಡೊ ಏರೋಸ್ಪೇಸ್ ಪಾರ್ಕ್,ವಿಶ್ವ ವ್ಯಾಪಾರ ಕೇಂದ್ರದ ಬ್ರಿಗೇಡ್ ಇಐ ಡೊರಾಡೊ ಮಾದರಿ ಘಟಕ, ದೇವನಹಳ್ಳಿಯಕಿನೋ ಬ್ರಿಗೇಡ್ ಆರ್ಚಾರ್ಡ್ಸ್, ಮೈಸೂರು ರಸ್ತೆಯ ಬ್ರಿಗೇಡ್ ಪನೋರಮಾ, ಬ್ರಿಗೇಡ್ ಮೆಡೋಸ್ ಪ್ಲುಮೆರಿಯಾ ಹಾಗೂ ಬೂದಿಗೆರೆ ಕ್ರಾಸ್‌ನಲ್ಲಿರುವಬ್ರಿಗೇಡ್ ಬ್ಯೂನಾವಿಸ್ಟಾ ದಲ್ಲಿ ಐಕೆಇಎ ಪೀಠೋಪರಕ ಗಳನ್ನು ಬಳಸಲಾಗಿದೆ.
ಬ್ರಿಗೇಡ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಪವಿತ್ರಾ ಶಂಕರ್ ‘ಗ್ರಾಹಕರ ದೈನಂದಿನ ಜೀವನವನ್ನು ಸಂತೋಷಪಡಿಸಲು ಐಕೆಇಎ ಪೀಠೋಪಕರಣ ಅಳವಡಿಕೆ ಮಾಡಲಾಗುತ್ತಿದೆ. ಗ್ರಾಹಕರು ತಮ್ಮ ಹಣಕಾಸು ಸಾಮರ್ಥ್ಯಕ್ಕೆ ಅನುಗುಣವಾಗಿ ಪೀಠೋಪಕರಣ ಖರೀದಿಸಬಹುದಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.