ಬೆಂಗಳೂರು: ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಅಡಿ 401 ಆರೋಪಿಗಳನ್ನು ಅಕ್ಟೋಬರ್‌ನಲ್ಲಿ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ತಿಳಿಸಿದರು.
‘ಮಟ್ಕಾ, ಆನ್‌ಲೈನ್ ಬೆಟ್ಟಿಂಗ್, ಎನ್‌ಡಿಪಿಎಸ್ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ 237 ಪ್ರಕರಣ ದಾಖಲಿಸಿಕೊಂಡು, ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
‘ಕಳೆದ ತಿಂಗಳು ಎನ್‌ಡಿಪಿಎಸ್ ಅಡಿ 42 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 10 ವಿದೇಶಿ ಪ್ರಜೆಗಳೂ ಸೇರಿ 64 ಮಂದಿ ಬಂಧಿಸಲಾಗಿದೆ’ ಎಂದರು.
ಬಂಧಿತರಿಂದ 140 ಗ್ರಾಂ ಗಾಂಜಾ, 1 ಕೆ.ಜಿ 217 ಗ್ರಾಂ ಗಾಂಜಾ ಎಣ್ಣೆ, 609 ಗ್ರಾಂ ಅಫೀಮು, 770 ಗ್ರಾಂ ಹೆರಾಯಿನ್, 2 ಕೆ.ಜಿ 436 ಗ್ರಾಂ ಚರಸ್, 509 ಗ್ರಾಂ ಕೊಕೇನ್, 5 ಕೆ.ಜಿ 397 ಗ್ರಾಂ ಎಂಡಿಎಂಎ, 11,908 ಎಕ್ಸೆಟೆಸಿ ಮಾತ್ರೆಗಳು ,2,569 ಎಲ್‌ಎಸ್‌ಡಿ ಸ್ಟ್ರಿಪ್ಸ್ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.