ಬೆಂಗಳೂರು: 2020ರ ಜುಲೈನಿಂದ 2023ರ ಮೇ ಅಂತ್ಯದವರೆಗೆ ರಾಜ್ಯದಲ್ಲಿ ಮದ್ಯದ ಅಕ್ರಮ ಮಾರಾಟ ಮಾಡಿದ ಆರೋಪದ ಮೇಲೆ 1.20 ಲಕ್ಷ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ತಿಳಿಸಿದ್ದಾರೆ.
ಜೆಡಿಎಸ್‌ನ ಸಿ.ಬಿ. ಸುರೇಶ್ ಬಾಬು ಪ್ರಶ್ನೆಗೆ ಮಂಗಳವಾರ ವಿಧಾನಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ಸಚಿವರು, ‘ಮದ್ಯದ ಅಕ್ರಮ ಮಾರಾಟ ನಡೆಯುತ್ತಿರುವ ಮಾಹಿತಿ ಆಧರಿಸಿ ರಾಜ್ಯದಾದ್ಯಂತ ಮೂರು ವರ್ಷಗಳಲ್ಲಿ 2.66 ಲಕ್ಷ ದಾಳಿಗಳನ್ನು ನಡೆಸಲಾಗಿದೆ. ಕರ್ನಾಟಕ ಅಬಕಾರಿ ಕಾಯ್ದೆಯ ಸೆಕ್ಷನ್ 32 ಹಾಗೂ 34ರ ಅಡಿಯಲ್ಲಿ 13,013 ಪ್ರಕರಣ ಮತ್ತು ಅಬಕಾರಿ ಕಾಯ್ದೆಯ ಸೆಕ್ಷನ್ 15(ಎ) ಅಡಿಯಲ್ಲಿ 1,07,166 ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
2020–21ರಲ್ಲಿ ಒಟ್ಟು 25,779, 2021–22ರಲ್ಲಿ ಒಟ್ಟು 29,863 ಮತ್ತು 2022–23ನೇ ಸಾಲಿನಲ್ಲಿ ಮೇ ಅಂತ್ಯದವರೆಗೆ ಒಟ್ಟು 64,537 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.