ಬೆಂಗಳೂರು: ಅಕ್ರಮವಾಗಿ ಶ್ರೀಗಂಧ ಮಾರಾಟ ಮಾಡಲು ಮುಂದಾಗಿದ್ದ ಆಂಧ್ರಪ್ರದೇಶದ ಇಬ್ಬರು ಆರೋಪಿಗಳನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಕಾಗಿನಾಡ ರೌತಲಪುಡಿಹಳ್ಳಿಯ ಸಿ.ಎಸ್.ಶ್ರೀನಿವಾಸ್ ಹಾಗೂ ಸೂರ್ಯಚಂದ್ರ ಸಿದ್ದಿರೆಡ್ಡಿ ಬಂಧಿತ ಆರೋಪಿಗಳು.
‘ಇಂದಿರಾನಗರದ 80 ಅಡಿ ರಸ್ತೆಯ ಮೆಟ್ರೊ ನಿಲ್ದಾಣದ ಬಳಿ ಶ್ರೀಗಂಧ ತುಂಡುಗಳನ್ನು ಮಾರಾಟಕ್ಕೆ ತಂದಿದ್ದರು. ಬಂಧಿತರಿಂದ 4 ಕೆ.ಜಿ 810 ಗ್ರಾಂ ಶ್ರೀಗಂಧದ ತುಂಡುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.