ADVERTISEMENT

ನೋವಸ್ ಮಕ್ಕಳ ಆರಂಭಿಕ ಕಲಿಕಾ ಕೇಂದ್ರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2022, 20:11 IST
Last Updated 11 ಜೂನ್ 2022, 20:11 IST
ಯಲಹಂಕ ಉಪನಗರದಲ್ಲಿ ನಾಗಾರ್ಜುನ ಸಮೂಹಶಿಕ್ಷಣ ಸಂಸ್ಥೆಯು ನೂತನವಾಗಿ ಆರಂಭಿಸಿರುವ ‘ನೋವಸ್’ ಮಕ್ಕಳ ಆರಂಭಿಕ ಕಲಿಕಾ ಕೇಂದ್ರವನ್ನು ಚಿತ್ರನಟ ರಮೇಶ್ ಅರವಿಂದ್ ಉದ್ಘಾಟಿಸಿದರು. ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ, ನಾಗಾರ್ಜುನ ಕನ್ಸ್ಟ್ರ್‌ಕ್ಷನ್‌ ಕಂಪೆನಿಯ ನಿರ್ದೇಶಕ ಜೆ.ವಿ.ರಂಗರಾಜು, ಶ್ರೀದೇವಿ ರಂಗರಾಜು, ಸೌಜನ್ಯಾ ಹಾಜರಿದ್ದರು

ಯಲಹಂಕ: ‘ಮಕ್ಕಳು ಹೇಳುವುದನ್ನು ಆಲಿಸುವ, ಗೌರವಿಸುವ ಹಾಗೂ ಒಳ್ಳೆಯದನ್ನು ಪ್ರೋತ್ಸಾಹಿಸುವ ಗುಣವನ್ನು ಪೋಷಕರು ಬೆಳೆಸಿಕೊಳ್ಳಬೇಕು’ ಎಂದು ನಟ ರಮೇಶ್ ಅರವಿಂದ್ ಹೇಳಿದರು.

ಯಲಹಂಕ ಉಪನಗರದಲ್ಲಿ ನಾಗಾರ್ಜುನ ಸಮೂಹಶಿಕ್ಷಣ ಸಂಸ್ಥೆಯು ನೂತನವಾಗಿ ಆರಂಭಿಸಿರುವ ‘ನೋವಸ್’ ಮಕ್ಕಳ ಆರಂಭಿಕ ಹಂತದ ಕಲಿಕಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಮಾತನಾಡಿ, ‘ಅನುಭವಾತ್ಮಕ ಕಲಿಕೆಗೆ ನಾವು ಹೆಚ್ಚಿನ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದ್ದು, ಪ್ರತಿ ಯೊಂದು ಮಕ್ಕಳು ಸೃಜನಾತ್ಮಕ ಗುಣ ಗಳನ್ನು ಹೊಂದಿರುತ್ತಾರೆ. ಅದಕ್ಕೆ ಸಾಮಾಜಿಕ ಪರಿಸರವು ಬಹಳ ಪ್ರಮುಖವಾಗಿದ್ದು, ಇಂತಹ ವಾತಾವರಣದಲ್ಲಿ ಹಲವಾರು ವಿಷಯಗಳನ್ನು ಕಲಿಯುತ್ತಾರೆ. ಅವರ ಕಲಿಕೆಯನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕು’ ಎಂದು ತಿಳಿಸಿದರು.

ADVERTISEMENT

ಜೆ.ವಿ.ರಂಗರಾಜು, ಜೆ.ವಿ.ರಂಗರಾಜು, ಶ್ರೀದೇವಿ ರಂಗ ರಾಜು,ಸೌಜನ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.