ADVERTISEMENT

ಸಾಹಿತಿ ಬಸವರಾಜ ಸಬರದ ಸೇರಿ ಮೂವರಿಗೆ ಪುಸ್ತಕ ಬಹುಮಾನ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 15:49 IST
Last Updated 12 ನವೆಂಬರ್ 2024, 15:49 IST
ಬಸವರಾಜ ಸಬರದ
ಬಸವರಾಜ ಸಬರದ   

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು ಮೂರು ವರ್ಷಗಳ ವಾರ್ಷಿಕ ಪುಸ್ತಕ ಬಹುಮಾನಗಳನ್ನು ಪ್ರಕಟಿಸಿದ್ದು, 2021ನೇ ಸಾಲಿಗೆ ಸಾಹಿತಿ ಬಸವರಾಜ ಸಬರದ ಅವರ ‘ರಂಗ ಮಾಧ್ಯಮ’ ಕೃತಿ ಆಯ್ಕೆಯಾಗಿದೆ. 

2022ನೇ ಸಾಲಿಗೆ ಬೆಂಗಳೂರಿನ ಟಿ.ವಿ. ವೆಂಕಟೇಶಮೂರ್ತಿ ಅವರ ‘ಕನ್ನಡ ನಾಟಕಗಳು ರಾತ್ರಿ ರೂಪಕಗಳು’ ಹಾಗೂ 2023ನೇ ಸಾಲಿಗೆ ಮೈಸೂರಿನ ರಾಮೇಶ್ವರಿ ವರ್ಮ ಅವರ ‘ಬಿಟ್ಟನೆಂದರು ಬಿಡದು ಈ ಮಾಯೆ’ ಕೃತಿ ಭಾಜನವಾಗಿದೆ. 

ಈ ಬಹುಮಾನಗಳು ತಲಾ ₹ 25 ಸಾವಿರ ನಗದು ಬಹುಮಾನ ಒಳಗೊಂಡಿವೆ. ಅತ್ಯುತ್ತಮ ರಂಗ ಕೃತಿಗಳಿಗೆ ಈ ಪ್ರಶಸ್ತಿ ನೀಡುತ್ತಿದ್ದು, ಜಿ.ವಿ. ಆನಂದಮೂರ್ತಿ, ಬಿ. ಸುರೇಶ್ ಮತ್ತು ಹೇಮಾ ಪಟ್ಟಣಶೆಟ್ಟಿ ಅವರನ್ನು ಒಳಗೊಂಡ ಸಮಿತಿ ಈ ಆಯ್ಕೆ ಮಾಡಿದೆ ಎಂದು ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ADVERTISEMENT
ಟಿ.ವಿ. ವೆಂಕಟೇಶಮೂರ್ತಿ
ರಾಮೇಶ್ವರಿ ವರ್ಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.