ADVERTISEMENT

ಶತಾಬ್ದಿ ರೈಲು: ಆದಾಯ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 31 ಜುಲೈ 2018, 20:00 IST
Last Updated 31 ಜುಲೈ 2018, 20:00 IST
   

ಬೆಂಗಳೂರು: ಬೆಂಗಳೂರು ಮತ್ತು ಮೈಸೂರು ಮಾರ್ಗದ ಶತಾಬ್ದಿ ರೈಲಿನ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಿದ್ದರಿಂದ, ಹೆಚ್ಚು ಮಂದಿ ಪ್ರಯಾಣಿಸಿದ್ದಾರೆ. ಇದರಿಂದ ಈ ವರ್ಷದ ಆದಾಯ ಹೆಚ್ಚಿದೆ.

2017ರಲ್ಲಿ ₹50 ಕೋಟಿ ಹೆಚ್ಚು ಆದಾಯ ಸಂಗ್ರಹವಾಗಿದೆ. 2016ರ ಅಕ್ಟೋಬರ್‌ನಲ್ಲಿ ಎಸಿ–3ಯ (ಚೇರ್‌ಕಾರ್) ದರವನ್ನು ₹490ರಿಂದ ₹260ಕ್ಕೆ ಇಳಿಸಲಾಯಿತು. ಅಲ್ಲಿಂದ ಹೆಚ್ಚು ಸೀಟುಗಳು ಭರ್ತಿಯಾಗಲು ಆರಂಭವಾಯಿತು ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಇ.ವಿಜಯ ತಿಳಿಸಿದರು.

‘ಸಾರ್ವಜನಿಕ ಸಾರಿಗೆ ಸೇವೆ ಕೈಗೆಟಕುವ ದರದಲ್ಲಿ ದೊರೆತರೆ ಹೆಚ್ಚು ಜನ ಬಳಸುತ್ತಾರೆ. ಈ ರೀತಿಯ ಪ್ರಯೋಗರೈಲ್ವೆ ಇಲಾಖೆಯಲ್ಲಿಯೇ ಮೊದಲು. ಬೆಂಗಳೂರು–ಮೈಸೂರು ಮಾರ್ಗದಲ್ಲಿನ ಸಂಚಾರ ದಟ್ಟಣೆಯನ್ನು ಗಮನಿಸಿ ದರ ಬದಲಾವಣೆ ಮಾಡು
ತ್ತಿರುತ್ತೇವೆ’ ಎಂದರು.

ADVERTISEMENT

‘ಈ ಪ್ರಯೋಗವನ್ನು ಬೇರೆ ರೈಲ್ವೆ ವಲಯಗಳಲ್ಲಿಯೂ ಅಳವಡಿಸಿಕೊಳ್ಳುವಂತೆ ರೈಲ್ವೆ ಮಂಡಳಿ ನಿರ್ದೇಶಿಸಿದೆ. ಬೆಂಗಳೂರು–ಮೈಸೂರು ಮಾರ್ಗದ ಇತರ ಐದು ರೈಲುಗಳ ಹವಾ ನಿಯಂತ್ರಿತ ಬೋಗಿಯ ದರದಲ್ಲಿ ರಿಯಾ
ಯಿತಿ ನೀಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.