ADVERTISEMENT

ಬೆಂಗಳೂರು | ಮೆಟ್ರೊ ಪ್ರಯಾಣಿಕರ ಸಂಖ್ಯೆ ಏರಿಕೆ

​ಪ್ರಜಾವಾಣಿ ವಾರ್ತೆ
Published 24 ಮೇ 2023, 6:29 IST
Last Updated 24 ಮೇ 2023, 6:29 IST
ಮೆಟ್ರೊ ರೈಲು
ಮೆಟ್ರೊ ರೈಲು   

ಬೆಂಗಳೂರು: ಮೆಟ್ರೊ ರೈಲು ಪ್ರಯಾಣಿಕರ ಸಂಖ್ಯೆ ತಿಂಗಳಿನಿಂದ ತಿಂಗಳಿಗೆ ಏರಿಕೆಯಾಗುತ್ತಿದ್ದು, ವರಮಾನ ಕೂಡ ಹೆಚ್ಚಾಗಿದೆ.

ಫೆಬ್ರುವರಿ ತಿಂಗಳಲ್ಲಿ 1.46 ಕೋಟಿ ಜನ ಪ್ರಯಾಣಿಸಿದ್ದು, ₹34.89 ಕೋಟಿ ವರಮಾನ ಸಂಗ್ರಹವಾಗಿದೆ. ಫೆ.11ರಂದು ಒಂದೇ ದಿನ 5.71 ಲಕ್ಷ ಜನ ಪ್ರಯಾಣಿಸಿದ್ದಾರೆ.

ಮಾರ್ಚ್‌ನಲ್ಲಿ 1.60 ಕೋಟಿ ಜನ ಪ್ರಯಾಣಿಸಿದ್ದು, ₹123.76 ಕೋಟಿ ವರಮಾನ ಸಂಗ್ರಹವಾಗಿದೆ. ಮಾರ್ಚ್ 4 ರಂದು ಒಂದೇ ದಿನ 6.13 ಲಕ್ಷ ಜನ ಪ್ರಯಾಣಿಸಿದ್ದು, ಆ ದಿನ ₹1.48 ಕೋಟಿ ವರಮಾನ ಸಂಗ್ರಹವಾಗಿದೆ.

ADVERTISEMENT

ಏಪ್ರಿಲ್‌ನಲ್ಲಿ 1.71 ಕೋಟಿ ಮಂದಿ ಮೆಟ್ರೊ ರೈಲಿನಲ್ಲಿ ಪ್ರಯಾಣ ಮಾಡಿದ್ದು, ₹136.87 ಕೋಟಿ ವರಮಾನ ಬಂದಿದೆ. ಏಪ್ರಿಲ್ 3ರಂದು ಒಂದೇ ದಿನ ₹1.64 ಕೋಟಿ ವರಮಾನ ಬಿಎಂಆರ್‌ಸಿಎಲ್‌ಗೆ ಬಂದಿದೆ.

ಸ್ಮಾರ್ಟ್‌ ಕಾರ್ಡ್‌ ಬಳಕೆದಾರರ ಸಂಖ್ಯೆಯೇ ಹೆಚ್ಚಿದ್ದು, ಫೆಬ್ರುವರಿಯಲ್ಲಿ ಶೇ 60.35ರಷ್ಟು ಪ್ರಯಾಣಿಕರು ಸ್ಮಾರ್ಟ್‌ ಕಾರ್ಡ್‌ ಬಳಸಿದ್ದರೆ, ಶೇ 39.59ರಷ್ಟು ಜನ ಟೋಕನ್‌ ಖರೀದಿಸಿದ್ದಾರೆ. ಶೇ 0.06 ನಷ್ಟು ಪ್ರಯಾಣಿಕರು ಗುಂಪು ಪ್ರಯಾಣದ ಟಿಕೆಟ್ ಖರೀದಿಸಿದ್ದಾರೆ.

ಮಾರ್ಚ್‌ನಲ್ಲಿ ಶೇ 59.85ರಷ್ಟು ಪ್ರಯಾಣಿಕರು ಸ್ಮಾರ್ಟ್‌ ಕಾರ್ಡ್‌ ಬಳಸಿದ್ದು, ಶೇ 40.09ರಷ್ಟು ಜನ ಟೋಕನ್ ಮತ್ತು ಶೇ 0.06ರಷ್ಟು ಪ್ರಯಾಣಿಕರು ಗುಂಪು ಪ್ರಯಾಣದ ಟಿಕೆಟ್ ಖರೀದಿಸಿದ್ದಾರೆ.

ಏಪ್ರಿಲ್‌ನಲ್ಲಿ ಶೇ 54.50ರಷ್ಟು ಪ್ರಯಾಣಿಕರು ಸ್ಮಾರ್ಟ್‌ ಕಾರ್ಡ್ ಬಳಸಿದ್ದರೆ, ಶೇ 45.45ರಷ್ಟು ಜನ ಟೋಕನ್ ಮತ್ತು ಶೇ 0.05ರಷ್ಟು ಜನ ಗುಂಪು ಪ್ರಯಾಣದ ಟಿಕೆಟ್ ಖರೀದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.