ಬೆಂಗಳೂರು: ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕರ್ನಾಟಕ ಶಾಖೆಗೆ 2024–25ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿ ರಚನೆಯಾಗಿದ್ದು, ಅಧ್ಯಕ್ಷರಾಗಿ ಡಾ.ವಿ.ವಿ. ಚಿನಿವಾಲರ್ ನಿಯೋಜನೆಗೊಂಡಿದ್ದಾರೆ.
ಇತ್ತೀಚೆಗೆ ನಗರದಲ್ಲಿ ನಡೆದ ಸಂಘದ ಸಭೆಯಲ್ಲಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆದಿದೆ. ನಿಯೋಜಿತ ಅಧ್ಯಕ್ಷರಾಗಿ ಡಾ.ಟಿ.ಎ. ವೀರಭದ್ರಯ್ಯ (ಮುಂದಿನ ಅವಧಿಗೆ), ಉಪಾಧ್ಯಕ್ಷರಾಗಿ ಡಾ.ಟಿ.ಎನ್. ಮರೀಗೌಡ, ಡಾ.ಆರ್.ಎನ್.ಮಲವೇಗೌಡ, ಡಾ.ಸುರೇಶ್ ವಿ. ಸಾಗರದ್, ಡಾ.ಸುಜಾತಾ ಎಸ್. ರಾವ್, 2024–26ರ ಅವಧಿಗೆ ಗೌರವ ಕಾರ್ಯದರ್ಶಿಯಾಗಿ ಡಾ. ಸೂರಿರಾಜು ವಿ., ಗೌರವ ಜಂಟಿ ಕಾರ್ಯದರ್ಶಿಯಾಗಿ ಡಾ. ಮಧುಶಂಕರ್ ಎಲ್., ಗೌರವ ಖಜಾಂಚಿಯಾಗಿ ಡಾ.ಕೆ.ಜಿ. ಶಂಕರನಾರಾಯಣ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಡಾ.ವಾಣಿ ಕೋರಿ ಅಧಿಕಾರ ಸ್ವೀಕರಿಸಿದ್ದಾರೆ ಎಂದು ಐಎಂಎ ಕರ್ನಾಟಕ ಶಾಖೆ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.