ADVERTISEMENT

ಬೆಂಗಳೂರು: ವಿಶೇಷ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 18:28 IST
Last Updated 1 ಜುಲೈ 2024, 18:28 IST
   

ಬೆಂಗಳೂರು: ಕೆಎಸ್‌ಆರ್ ಬೆಂಗಳೂರು-ಕೋಲಾರ ಡೆಮು ಮತ್ತು ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್ ಮೆಮು ವಿಶೇಷ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಜುಲೈ 2ರಿಂದ ಹೊಸ ವೇಳಾಪಟ್ಟಿ ಅನ್ವಯವಾಗಲಿದೆ.

ಕೆಎಸ್‌ಆರ್‌ ಬೆಂಗಳೂರಿನಿಂದ ಡೆಮು ರೈಲು ಸಂಜೆ 6.10ಕ್ಕೆ ಹೊರಟು ಕೋಲಾರಕ್ಕೆ ರಾತ್ರಿ 9.30ಕ್ಕೆ ತಲುಪುತ್ತಿತ್ತು. ಜುಲೈ 2ರಿಂದ ಸಂಜೆ 6.20ಕ್ಕೆ ಹೊರಡಲಿದೆ. ಕೋಲಾರಕ್ಕೆ 9.40ಕ್ಕೆ ತಲುಪಲಿದೆ.

ಮೆಮು ರೈಲು ಚಿಕ್ಕಬಳ್ಳಾಪುರದಿಂದ ಸಂಜೆ 6.45ಕ್ಕೆ ಹೊರಟು, ರಾತ್ರಿ 9ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ ನಿಲ್ದಾಣಕ್ಕೆ ತಲುಪುತ್ತಿತ್ತು. ಇನ್ನು ಮುಂದೆ ಸಂಜೆ 6.50ಕ್ಕೆ ಹೊರಡಲಿದೆ. ಕಂಟೋನ್ಮೆಂಟ್‌ಗೆ ಎಂದಿನ ಸಮಯಕ್ಕೆ (ರಾತ್ರಿ 9) ತಲುಪಲಿದೆ.

ADVERTISEMENT

ಮೈಸೂರು-ಪಂಢರಪುರ ಗೋಲಗುಂಬಜ್ ಎಕ್ಸ್‌ಪ್ರೆಸ್‌ ರೈಲಿನ ವೇಳಾಪಟ್ಟಿ ಪರಿಷ್ಕರಣೆಯಿಂದಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ್‌ ಕನಮಡಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.