ADVERTISEMENT

ಪೀಣ್ಯ ದಾಸರಹಳ್ಳಿ: ಇಂದಿರಾ ಕ್ಯಾಂಟಿನ್‌ ಕಟ್ಟಡಕ್ಕೆ ಭೂಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2024, 14:29 IST
Last Updated 13 ಸೆಪ್ಟೆಂಬರ್ 2024, 14:29 IST
ಚಿಕ್ಕಬಾಣಾವರದಲ್ಲಿ ಅಂಗವಿಕಲ ಫಲಾನುಭವಿಗಳಿಗೆ ತ್ರಿಚಕ್ರ (ಮೋಪೆಡ್)ವಾಹನಗಳನ್ನು ಶಾಸಕ ಎಸ್. ಮುನಿರಾಜು ಹಸ್ತಾಂತರಿಸಿದರು.  
ಚಿಕ್ಕಬಾಣಾವರದಲ್ಲಿ ಅಂಗವಿಕಲ ಫಲಾನುಭವಿಗಳಿಗೆ ತ್ರಿಚಕ್ರ (ಮೋಪೆಡ್)ವಾಹನಗಳನ್ನು ಶಾಸಕ ಎಸ್. ಮುನಿರಾಜು ಹಸ್ತಾಂತರಿಸಿದರು.     

ಪೀಣ್ಯ ದಾಸರಹಳ್ಳಿ: ಚಿಕ್ಕಬಾಣಾವರ ಪುರಸಭೆ ವ್ಯಾಪ್ತಿಯ ಸಂತೆ ಸರ್ಕಲ್ ಸಮೀಪ ₹70 ಲಕ್ಷ ವೆಚ್ಚದಲ್ಲಿ ಇಂದಿರಾ ಕ್ಯಾಂಟಿನ್‌ ಕಟ್ಟಡ ನಿರ್ಮಾಣಕ್ಕೆ ಶಾಸಕ ಎಸ್. ಮುನಿರಾಜು ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ’ಬಡವರಿಗೆ, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಅನೇಕರಿಗೆ ಇಂದಿರಾ ಕ್ಯಾಂಟಿನ್ ವರದಾನವಾಗಿದೆ’ ಎಂದರು.

ಇದೇ ವೇಳೆ ಪುರಸಭೆಯಲ್ಲಿ ಅಂಗವಿಕಲರ ಅನುದಾನದಲ್ಲಿ ಖರೀದಿಸಿರುವ ತ್ರಿಚಕ್ರ (ಮೋಪೆಡ್) ವಾಹನಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು. ಸ್ತ್ರೀ ಶಕ್ತಿ ಗುಂಪುಗಳಿಗೆ ಚೆಕ್ ವಿತರಿಸಲಾಯಿತು.

ADVERTISEMENT

ನಂತರ ಎಸ್.ಮುನಿರಾಜು ಬಡಾವಣೆ, ಕೆರೆಗುಡ್ಡದಹಳ್ಳಿ ಕಾಲೊನಿ(ಸೋಮಶೆಟ್ಟಿಹಳ್ಳಿ ಮುಖ್ಯರಸ್ತೆ) ಮತ್ತು ಜಿ.ಆರ್.ಲೇಔಟ್‌ನಲ್ಲಿ ಹೊಸದಾಗಿ ಕೊರೆದಿರುವ ಕೊಳವೆಬಾವಿಗಳನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.