ಬೆಂಗಳೂರು: ಫಿಲ್ಮಿಹಾಲಿಕ್ ಫೌಂಡೇಷನ್ ವತಿಯಿಂದ ‘ಅಂತರರಾಷ್ಟ್ರೀಯ ಪನೋರಮ ಚಲನಚಿತ್ರೋತ್ಸವ’ವನ್ನು ಡಿ. 17, 18ರಂದು ಅರಮನೆ ರಸ್ತೆಯ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
‘ಮಕ್ಕಳು ಮತ್ತು ಪ್ರಾದೇಶಿಕತೆಗೆ ಸಂಬಂಧಿಸಿದ ಕನ್ನಡ, ಬಾಂಗ್ಲಾ, ಕೊಡವ, ಜಪಾನಿ ಸೇರಿ ಹಲವು ಭಾಷೆಗಳ 100ಕ್ಕೂ ಅಧಿಕ ಚಲನ
ಚಿತ್ರಗಳು ಆಯ್ಕೆಗೆ ಲಭ್ಯವಿದ್ದು, ಅದರಲ್ಲಿ ಎಂಟು ಅತ್ಯುತ್ತಮ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು’ ಎಂದು ಸಂಸ್ಥೆಯ ಸಂಸ್ಥಾಪಕ ಆದಿತ್ಯ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಚಲನಚಿತ್ರೋತ್ಸವದಲ್ಲಿ ಎಲ್ಲರಿಗೂ ಉಚಿತ ಪ್ರವೇಶವಿದ್ದು, ಆಸಕ್ತರು ಡಿ. 16ರೊಳಗೆ 9986384254 ವ್ಯಾಟ್ಸ್‌ಆ್ಯಪ್ ಸಂಖ್ಯೆ ಸಂಪರ್ಕಿಸಿ ನೋಂದಾಯಿಸಿಕೊಳ್ಳಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.