ಬೆಂಗಳೂರು: ಸಾಧಕರನ್ನು ಗುರುತಿಸುವುದರ ಮೂಲಕ ಅವರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಸಾಧನೆ ಮಾಡಿಯೂ ಎಲೆಮರೆ ಕಾಯಿಯಂತೆ ಪ್ರಚಾರದಿಂದ ದೂರ ಇರುವವರನ್ನು ಗುರುತಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಮತ್ತು ಕಬ್ಬನ್ ಪಾರ್ಕ್ ವಾಕರ್ಸ್ ಫೋರಂ ಶನಿವಾರ ಆಯೋಜಿಸಿದ್ದ ಇಂಟರ್‌ನ್ಯಾಷನಲ್ ವುಮೆನ್ಸ್ ಅಚೀವರ್ಸ್ ಅವಾರ್ಡ್ಸ್, ಯಂಗ್ ಅಚೀವರ್ಸ್ ಅವಾರ್ಡ್ಸ್ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿರುವ ಸಾಧನೆ ಮಾಡಿರುವ ಇಲ್ಲಿನ ಮಹಿಳೆಯರನ್ನು ಗುರುತಿಸುವ ಕೆಲಸವನ್ನು ಈ ಸಂಘಟನೆಗಳು ಕಳೆದ ನಾಲ್ಕು ವರ್ಷಗಳಿಂದ ಮಾಡುತ್ತಾ ಬಂದಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಉಮೇಶ್ ಕಾರ್ಯಕ್ರಮದ ವಿವರ ನೀಡಿದರು.
ಕೃಷ್ಣಭಾಗ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ಮೋಹನ್‌ರಾಜ್, ಮಹಿಳಾ ಸಾಧಕರಾದ ಡಾ. ಆರತಿ ಕೃಷ್ಣ, ಅಂಜು ಬಾಬಿ ಜಾರ್ಜ್, ರೆಬೆಕಾ ಮರಿಸ್ಸಾ ಟೇಲರ್, ಸೌಮ್ಯಾ ರೆಡ್ಡಿ, ಪ್ರೇಮಾ, ಕಸ್ತೂರಿ ಶಂಕರ್, ಆರತಿ, ಗೌರಿ, ಪ್ರಿಯಾ ಕೆರ್ವಾಶೆ, ಡಾ. ಸುಧಾ, ದೀಪ್ತಿ ತೋಳ್ಪಾಡಿ, ಪೃಥ್ವಿ ವಕುಡ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.