ಬೆಂಗಳೂರು: ಜ.13ರಂದುಇಸ್ಕಾನ್‌ನಲ್ಲಿ ನಡೆಯುವ ವೈಕುಂಠ ಏಕಾದಶಿಗೆಕೋವಿಡ್‌ನಿಂದಾಗಿ ಭಕ್ತರಿಗೆ ಪ್ರವೇಶ ಇರುವುದಿಲ್ಲ. ಆನ್‌ಲೈನ್ ಮೂಲಕ ಧಾರ್ಮಿಕ ಕಾರ್ಯಕ್ರಮಗಳ ನೇರಪ್ರಸಾರ ವ್ಯವಸ್ಥೆ ಕಲ್ಪಿಸಲಾಗಿದೆ.
ಸರ್ಕಾರ ಹೊರಡಿಸಿರುವ ಮುನ್ನೆಚ್ಚರಿಕೆಯ ಕ್ರಮವಾಗಿ ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ವಿಶೇಷ ಆಹ್ವಾನಿತರಿಗೆ ಮಾತ್ರ ದರ್ಶನಕ್ಕೆ ಅವಕಾಶ ಇರುತ್ತದೆ.
ದೇವಸ್ಥಾನದ ಅಧಿಕೃತ ಜಾಲತಾಣ www.iskconbangalore.org ಹಾಗೂ ಇಸ್ಕಾನ್ ಬೆಂಗಳೂರು ಯೂಟ್ಯೂಬ್ ಚಾನೆಲ್‌ನಲ್ಲಿಉತ್ಸವದ ನೇರಪ್ರಸಾರ ಇರಲಿದೆ. ಭಕ್ತರು ಮನೆಯಿಂದಲೇ ದೇವರ ದರ್ಶನ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.
ಉತ್ಸವದ ವೇಳಾಪಟ್ಟಿ: ಬೆಳಿಗ್ಗೆ 3.45ಕ್ಕೆ ಶ್ರೀನಿವಾಸ ಗೋವಿಂದ ಮಹಾಭಿಷೇಕ, 5.45ಕ್ಕೆ ವೈಕುಂಠ ದ್ವಾರ ಅನಾವರಣ,8.30ಕ್ಕೆ ಲಕ್ಷಾರ್ಚನ ಸೇವೆ, ಬೆಳಿಗ್ಗೆ 11 ಮತ್ತು ಸಂಜೆ 6 ಗಂಟೆಗೆ ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮಾ ಕಲ್ಯಾಣೋತ್ಸವ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.