ಬೆಂಗಳೂರು: ರಾಜ್ಯದ ಎರಡು ಗುತ್ತಿಗೆ ಕಂಪನಿಗಳ ಮೇಲೆ ಗುರುವಾರ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು, ಶುಕ್ರವಾರವೂ ತಮ್ಮ ದಾಳಿ ಮುಂದುವರಿಸಿದ್ದಾರೆ.
ಬಿಬಿಎಂಪಿ ಗುತ್ತಿಗೆದಾರರೊಬ್ಬರ ಮನೆ ಹಾಗೂ ಅವರ ಮಗಳ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇವರ ಮನೆಯಲ್ಲಿ ಗುರುವಾರ ತಡರಾತ್ರಿಯಿಂದ ಶೋಧ ನಡೆದಿದೆ.
ಬಿಬಿಎಂಪಿ ಗುತ್ತಿಗೆದಾರನ ಮಗಳ ಮನೆಯಲ್ಲಿ ₹42 ಕೋಟಿ ನಗದು ಪತ್ತೆಯಾಗಿರುವುದಾಗಿ ಗೊತ್ತಾಗಿದೆ. ಶುಕ್ರವಾರ ಬೆಳಿಗ್ಗೆಯೂ ಶೋಧ ಮುಂದಿವರಿದಿದೆ.
23 ಬಾಕ್ಸ್‌ಗಳಲ್ಲಿ ಹಣ ತುಂಬಿಡಲಾಗಿತ್ತು. ತಮಿಳುನಾಡಿಗೆ ಹಣ ಸಾಗಿಸಲು ತಯಾರಿ ನಡೆದಿತ್ತು. ಇದರ ಜೊತೆಯಲ್ಲೇ, ಮಾಜಿ ಕಾರ್ಪೊರೇಟರ್ ಮನೆ ಮೇಲೂ ಐಟಿ ದಾಳಿ ನಡೆದಿದೆ. ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.