ADVERTISEMENT

ಜಾಗ್ವಾರ್‌ ಲ್ಯಾಂಡ್‌ ರೋವರ್‌ನ ನೂತನ ಮಾರಾಟ ಮಳಿಗೆ ಆರಂಭ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 19:00 IST
Last Updated 19 ಜುಲೈ 2019, 19:00 IST
ಜಾಗ್ವಾರ್‌ ಲ್ಯಾಂಡ್‌ ರೋವರ್‌ ಕಾರುಗಳ ನೂತನ ಮಳಿಗೆಯನ್ನು ಜೆಎಲ್‌ಆರ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೋಹಿತ್‌ ಸೂರಿ, ಮಾರ್ಕ್‌ಲ್ಯಾಂಡ್‌ ನಿರ್ದೇಶಕ ನವೀನ್‌ ಫಿಲಿಪ್‌ ಶುಕ್ರವಾರ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ
ಜಾಗ್ವಾರ್‌ ಲ್ಯಾಂಡ್‌ ರೋವರ್‌ ಕಾರುಗಳ ನೂತನ ಮಳಿಗೆಯನ್ನು ಜೆಎಲ್‌ಆರ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರೋಹಿತ್‌ ಸೂರಿ, ಮಾರ್ಕ್‌ಲ್ಯಾಂಡ್‌ ನಿರ್ದೇಶಕ ನವೀನ್‌ ಫಿಲಿಪ್‌ ಶುಕ್ರವಾರ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಟಾಟಾ ಮೋಟರ್ಸ್ ಮಾಲೀಕತ್ವದ ಜಾಗ್ವಾರ್‌ ಲ್ಯಾಂಡ್‌ ರೋವರ್‌ (ಜೆಎಲ್‌ಆರ್) ತನ್ನ ಕಾರುಗಳ ನೂತನ ಐಷಾರಾಮಿ ಮಾರಾಟ ಮಳಿಗೆಯನ್ನು ನಗರದ ಕನ್ನಿಂಗ್‌ ಹ್ಯಾಮ್‌ ರಸ್ತೆಯಲ್ಲಿ ಆರಂಭಿಸಿದೆ.

ಮಳಿಗೆಯ ಉದ್ಘಾಟನೆಯನ್ನು ಜೆಎಲ್‌ಆರ್‌ ವ್ಯವಸ್ಥಾಪಕ ನಿರ್ದೇಶಕ ರೋಹಿತ್‌ ಸೂರಿ, ಮಾರ್ಕ್‌ಲ್ಯಾಂಡ್‌ ನಿರ್ದೇಶಕ ನವೀನ್‌ ಫಿಲಿಪ್‌ ಶುಕ್ರವಾರ ನೆರವೇರಿಸಿದರು.

‘ದೇಶದ 24 ನಗರಗಳಲ್ಲಿ 26 ಮಳಿಗೆಗಳನ್ನು ತೆರೆಯಲಾಗಿದ್ದು, ಬೆಂಗಳೂರಿನಲ್ಲಿ ಇದು ಎರಡನೆಯದಾಗಿದೆ.ಹೊಸ ಗ್ರಾಹಕರನ್ನು ಸೆಳೆಯುವ ದೃಷ್ಟಿಯಿಂದ ನೂತನ ಮಳಿಗೆಯನ್ನು ನಗರದ ಹೃದಯ ಭಾಗದಲ್ಲಿ ಆರಂಭಿಸಲಾಗಿದೆ’ ಎಂದು ಜೆಎಲ್‌ಆರ್ ಅಧ್ಯಕ್ಷ ರೋಹಿತ್‌ ಸೂರಿ ಮಾಹಿತಿ ನೀಡಿದರು.

ADVERTISEMENT

‘ಬೆಂಗಳೂರಿನಲ್ಲಿ ಕಾರು ಬಳಕೆಯ ಸಂಸ್ಕೃತಿ ಬೆಳೆಯುತ್ತಿದೆ. ಮಧ್ಯಮ ವರ್ಗದವರೂ ಐಷಾರಾಮಿ ಕಾರು ಖರೀದಿಸಲು ಇಷ್ಟಪಡುತ್ತಿದ್ದಾರೆ. ಅವರಿಗಾಗಿಯೇ ಅನುಕೂಲಕರ ‘ಇಎಂಐ’ ಸೌಲಭ್ಯಗಳನ್ನು ಒದಗಿಸಲಾಗಿದೆ. ಜಾಗ್ವಾರ್‌ ಮತ್ತು ಲ್ಯಾಂಡ್‌ರೋವರ್‌ ಕಾರುಗಳ ಬೆಲೆ ₹ 40.6 ಲಕ್ಷದಿಂದ 1 ಕೋಟಿವರೆಗೂ ಇದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.