ADVERTISEMENT

ಜೈನ ಪದ್ಧತಿ ಕಮ್ಮಟ ಜೂನ್‌ 9ರಿಂದ

​ಪ್ರಜಾವಾಣಿ ವಾರ್ತೆ
Published 10 ಮೇ 2022, 20:08 IST
Last Updated 10 ಮೇ 2022, 20:08 IST

ಬೆಂಗಳೂರು: ಜೈನ ಅಧ್ಯಯನ ಕೇಂದ್ರವು ಜೂನ್‌ 9 ಮತ್ತು 10ರಂದು ಅಂತರರಾಷ್ಟ್ರೀಯ ಕಮ್ಮಟ ನಡೆಸಲು ನಿರ್ಧರಿಸಿದೆ.

‘23ನೇ ವರ್ಷದ ಈ ಕಮ್ಮಟದಲ್ಲಿ ಜೈನ ಜ್ಞಾನ ಪದ್ಧತಿಗಳ ಕುರಿತು ಚರ್ಚಿಸಲಾಗುತ್ತದೆ. ಬೆಂಗಳೂರಿನ ಕೃಷ್ಣರಾಜಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಪ್ರತಿಭಾ ಪಾರ್ಶ್ವನಾಥ್ ಹಾಗೂ ಸಾಹಿತಿ ಹಂ.ಪ.ನಾಗರಾಜಯ್ಯ ಅವರು ವಿಷಯ ಮಂಡಿಸಲಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT