ಬೆಂಗಳೂರು: ಸಾರ್ವಜನಿಕರು ಮಾಹಿತಿ ಪಡೆಯಲು, ಗೊಂದಲ ಪರಿಹರಿಸಿಕೊಳ್ಳಲು ಬೆಂಗಳೂರು ಒಳಚರಂಡಿ ಮಂಡಳಿ ಮಾರ್ಚ್ 30ರಂದು ಬೆಳಿಗ್ಗೆ 9ರಿಂದ 10.30ರವರೆಗೆ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಂಡಿದೆ.
ಸಾರ್ವಜನಿಕರು ನೀರಿನ ಸಮಸ್ಯೆ, ಒಳಚರಂಡಿ ಸಮಸ್ಯೆ, ಮ್ಯಾನ್‌ಹೋಲ್‌ನಿಂದ ತ್ಯಾಜ್ಯ ನೀರು ಹೊರಬರುತ್ತಿರುವ ಸಮಸ್ಯೆ, ಜಲಮಾಪನ, ನೀರಿನ ಬಿಲ್ಲಿನ ಸಮಸ್ಯೆಗಳ ಬಗ್ಗೆ ನೇರವಾಗಿ ಮಾತನಾಡಬಹುದು. ಸಾರ್ವಜನಿಕರು ದೂರವಾಣಿ 080–22945119 ಸಂಪರ್ಕಿಸುವಂತೆ ಅಧಿಕಾರಿಗಳು ಕೋರಿದ್ದಾರೆ.
ವಿಬ್‌ಗಯರ್ ರಸ್ತೆ ಬಂದ್:
ಆಗ್ನೇಯ ಬೆಂಗಳೂರಿನಲ್ಲಿ ಕಾವೇರಿ 5ನೇ ಹಂತದ ಯೋಜನೆಗೆ ಸಂಬಂಧಿಸಿದ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗಾಗಿ ವಿಬ್‌ಗಯರ್ ರಸ್ತೆಯನ್ನು ಏ.1ರವರೆಗೆ ಸಂಚಾರ ಪೊಲೀಸರು ಮುಚ್ಚಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಗುರುವಾರ ಕೆಲಸ ಆರಂಭಿಸಿದ್ದು, ವಾರಾಂತ್ಯದಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಎಚ್‌ಎಎಲ್ ಹಳೆ ವಿಮಾನ ನಿಲ್ದಾಣ ರಸ್ತೆ ಮತ್ತು ಕುಂದಲಹಳ್ಳಿ ಕಡೆಯಿಂದ ಬಳಗೆರೆ ಟಿ ಜಂಕ್ಷನ್ ಕಡೆಗೆ ಹೋಗುವ ವಾಹನಗಳು ವರ್ತೂರು ಕೋಡಿ ಮತ್ತು ತೂಬರಹಳ್ಳಿ ವಿಸ್ತರಣೆ ಮೂಲಕ ಜಂಕ್ಷನ್‌ಗೆ ತಲುಪಬಹುದು. ವಿರುದ್ಧ ದಿಕ್ಕಿನಲ್ಲಿ ಹೋಗುವ ವಾಹನಗಳು ಪಣತ್ತೂರು, ವರ್ತೂರು ರಸ್ತೆ ಅಥವಾ ಮುನ್ನೇಕೊಳಾಲ ರಸ್ತೆ ಮೂಲಕ ಸಂಚರಿಸಬಹುದು. ಎಚ್‌ಎಎಲ್ ಹಳೆ ವಿಮಾನ ನಿಲ್ದಾಣ ರಸ್ತೆ ಮೂಲಕ ಬರುವ ಭಾರಿ ವಾಹನಗಳು ವರ್ತೂರು ಕೋಡಿ ಕಡೆಗೆ ಹೋಗಬಹುದು ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.