ADVERTISEMENT

ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಜನೌಷಧ ಕೇಂದ್ರ: ಸಚಿವ ಡಿ.ವಿ. ಸದಾನಂದಗೌಡ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 4:49 IST
Last Updated 19 ಫೆಬ್ರುವರಿ 2021, 4:49 IST
ನಾಗರಬಾವಿಯಲ್ಲಿ ಜನೌಷಧ ಮಳಿಗೆಯನ್ನು ಡಿ.ವಿ. ಸದಾನಂದಗೌಡ ಉದ್ಘಾಟಿಸಿದರು
ನಾಗರಬಾವಿಯಲ್ಲಿ ಜನೌಷಧ ಮಳಿಗೆಯನ್ನು ಡಿ.ವಿ. ಸದಾನಂದಗೌಡ ಉದ್ಘಾಟಿಸಿದರು   

ಬೆಂಗಳೂರು: ಜನ ಸಾಮಾನ್ಯರ ಅನುಕೂಲಕ್ಕಾಗಿ ದೇಶದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಜನೌಷಧ ಕೇಂದ್ರ ತೆರೆಯಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.

ನಾಗರಬಾವಿಯಲ್ಲಿ ಜನೌಷಧಿ ಮಳಿಗೆ ಉದ್ಘಾಟಿಸಿ ಮಾತನಾಡಿದ ಅವರು, ‘ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಅದರಲ್ಲೂ ಬಡವರಿಗೆ ಜನೌಷಧಿಯನ್ನೇ ವೈದ್ಯರು ಬರೆದುಕೊಡಬೇಕು’ ಎಂದು ಮನವಿ ಮಾಡಿದರು.

‘ಜನೌಷಧಿಯೂ ಬ್ರಾಂಡೆಡ್ ಔಷಧಗಳಷ್ಟೇ ಗುಣಮಟ್ಟದ್ದು. ಆದರೆ, ದರ ಕಡಿಮೆ. ಉದಾಹರಣೆಗೆ ಮಧುಮೇಹ, ರಕ್ತದೊತ್ತಡ ಮುಂತಾದ ಖಾಯಿಲೆಗಳಿಗೆ ಸಾಮಾನ್ಯ ಔಷಧ ಅಂಗಡಿಗಳಲ್ಲಿ ಔಷಧ ಖರೀದಿಸಬೇಕೆಂದರೆ ತಿಂಗಳಿಗೆ ₹2,500 ರಿಂದ ₹3 ಸಾವಿರ ವೆಚ್ಚವಾಗುತ್ತದೆ. ಇದೇ ಔಷಧ ಜನೌಷಧ ಕೇಂದ್ರಗಳಲ್ಲಿ ₹250ರಿಂದ ₹300ರೊಳಗೆ ಸಿಗಲಿದೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.