ADVERTISEMENT

ಜ್ಞಾನಭಾರತಿ ಕ್ಯಾಂಪಸ್‌ ಪ್ರವೇಶಕ್ಕೆ ಶೀಘ್ರ ನಿರ್ಬಂಧ

ಅಪರಾಧ ಕೃತ್ಯ ತಡೆಯುವ ಯತ್ನ, ಕಾಂಪೌಂಡ್‌ ನಿರ್ಮಾಣ ಪ್ರಗತಿಯಲ್ಲಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 2:57 IST
Last Updated 31 ಅಕ್ಟೋಬರ್ 2019, 2:57 IST
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು ವಿಶ್ವವಿದ್ಯಾಲಯ    

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ವಿಶಾಲವಾದ ಜ್ಞಾನಭಾರತಿ ಕ್ಯಾಂಪಸ್‌ಗೆ ಇನ್ನು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಬೀಳಲಿದೆ.

‘ಕ್ಯಾಂಪಸ್‌ನೊಳಗೆ ನಡೆಯುತ್ತಿರುವ ಅಪರಾಧ ಕೃತ್ಯಗಳು, ಅಪಘಾತ, ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಎರಡು ಕಡೆಗಳಲ್ಲಿ ಮಾತ್ರ ವಾಹನಗಳ ಪ್ರವೇಶ ದ್ವಾರ ಇಟ್ಟು, ಉಳಿದ ರಸ್ತೆಗಳನ್ನು ಸಾರ್ವಜನಿಕರಿಗೆ ಮುಚ್ಚಲಾಗುವುದು. ಎರಡು ದ್ವಾರಗಳಲ್ಲಿ ಸಹ ಸಾರ್ವಜನಿಕರಿಗೆ ಮುಕ್ತ ಪ್ರವೇಶವನ್ನು ನಿರ್ಬಂಧಿಸಲಾಗುವುದು. ಸದ್ಯ ಕಾಂಪೌಂಡ್‌ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಬಾಕಿ ಉಳಿದ ಶೇ 30ರಷ್ಟು ಕಾಂಪೌಂಡ್ ಕಾಮಗಾರಿ 6 ತಿಂಗಳೊಳಗೆ ಮುಗಿಯಲಿದೆ. ಬಳಿಕ ಈ ನಿರ್ಬಂಧ ಜಾರಿಗೆ ಬರಲಿದೆ’ ಎಂದು ಕುಲಪತಿ ಪ್ರೊ. ಕೆ. ಆರ್. ವೇಣುಗೋಪಾಲ್‌ ತಿಳಿಸಿದ್ದಾರೆ.

ಕ್ಯಾಂಪಸ್‌ಗೆ ನಾಲ್ಕು ಕಡೆ ಪ್ರವೇಶ ದ್ವಾರಗಳಿವೆ. ಮೈಸೂರು ರಸ್ತೆ, ರಿಂಗ್‌ ರಸ್ತೆ, ನಾಗರಬಾವಿ ಮತ್ತು ಕ್ರೀಡಾ ಪ್ರಾಧಿಕಾರ ಕಡೆಗಳಿಂದ ಕ್ಯಾಂಪಸ್‌ನೊಳಗೆ ಬರಬಹುದು. ಮುಂದೆ ನಾಗರಬಾವಿ ಮತ್ತು ಕ್ರೀಡಾ ಪ್ರಾಧಿಕಾರ ರಸ್ತೆಗಳನ್ನು ಸಾರ್ವಜನಿಕರಿಗೆ ಶಾಶ್ವತವಾಗಿ ಮುಚ್ಚಲಾಗುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.