ADVERTISEMENT

ಬೆಂಗಳೂರು: ಜೋಯಾಲುಕ್ಕಾಸ್‌ ವಜ್ರಾಭರಣ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 4:24 IST
Last Updated 16 ಆಗಸ್ಟ್ 2024, 4:24 IST
ಗೃಹ ಸಚಿವ ಜಿ.ಪರಮೇಶ್ವರ ಅವರ ಪತ್ನಿ ಕನ್ನಿಕಾ ಪರಮೇಶ್ವರಿ (ಬಲಬದಿ) ಅವರು ವಜ್ರಾಭರಣ ಪ್ರದರ್ಶನವನ್ನು ಬುಧವಾರ ಉದ್ಘಾಟಿಸಿದರು. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಥಾಮಸ್ ಮ್ಯಾಥ್ಯೂ ಇದ್ದರು   –ಪ್ರಜಾವಾಣಿ ಚಿತ್ರ
ಗೃಹ ಸಚಿವ ಜಿ.ಪರಮೇಶ್ವರ ಅವರ ಪತ್ನಿ ಕನ್ನಿಕಾ ಪರಮೇಶ್ವರಿ (ಬಲಬದಿ) ಅವರು ವಜ್ರಾಭರಣ ಪ್ರದರ್ಶನವನ್ನು ಬುಧವಾರ ಉದ್ಘಾಟಿಸಿದರು. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಥಾಮಸ್ ಮ್ಯಾಥ್ಯೂ ಇದ್ದರು   –ಪ್ರಜಾವಾಣಿ ಚಿತ್ರ   

ಬೆಂಗಳೂರು: ಚಿನ್ನಾಭರಣ ವ್ಯಾಪಾರ ಸಂಸ್ಥೆ ಜೋಯಾಲುಕ್ಕಾಸ್‌ ಬುಧವಾರದಿಂದ ‘ವಜ್ರಾಭರಣಗಳ ಪ್ರದರ್ಶನ’ವನ್ನು ಆರಂಭಿಸಿದೆ.

ನಗರದ ಎಂ.ಜಿ.ರಸ್ತೆಯಲ್ಲಿರುವ ಮಳಿಗೆಯಲ್ಲಿ ಸೆಪ್ಟೆಂಬರ್ 1ರವರೆಗೂ ಪ್ರದರ್ಶನ ನಡೆಯಲಿದೆ.

‘ಸಾಂಪ್ರದಾಯಿಕ ಮತ್ತು ಆಧುನಿಕ ವಿನ್ಯಾಸದ ವಜ್ರಾಭರಣಗಳು ಮತ್ತು ವಜ್ರಗಳೂ ಈ ಪ್ರದರ್ಶನದಲ್ಲಿ ಇವೆ. ಈ ವಜ್ರಗಳು ಕುಶಲಕರ್ಮಿಗಳ ಕುಸುರಿ ಕೆಲಸಕ್ಕೆ ಕನ್ನಡಿ ಹಿಡಿದಂತಿವೆ. ಕಚ್ಚಾರೂಪದ ‘ಅನ್‌ಕಟ್‌’ ವಜ್ರಗಳು, ಅತ್ಯಪರೂಪದ ವಜ್ರಗಳು, ಅಪರೂಪದ ವಜ್ರಾಭರಣಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿದೆ’ ಎಂದು ಜೋಯಾಲುಕ್ಕಾಸ್‌ ತಿಳಿಸಿದೆ.

ADVERTISEMENT

‘ಪ್ರದರ್ಶನದಲ್ಲಿ ₹1 ಲಕ್ಷ ಮತ್ತು ಅದಕ್ಕಿಂತಲೂ ಹೆಚ್ಚಿನ ಮೌಲ್ಯದ ವಜ್ರಾಭರಣ ಖರೀದಿಸುವವರಿಗೆ 1 ಗ್ರಾಂನಷ್ಟು ಚಿನ್ನದ ನಾಣ್ಯ ಉಚಿತವಾಗಿ ನೀಡಲಾಗುತ್ತದೆ’ ಎಂದು ಸಂಸ್ಥೆ ಹೇಳಿದೆ.

ಗೃಹ ಸಚಿವ ಜಿ.ಪರಮೇಶ್ವರ ಅವರ ಪತ್ನಿ ಕನ್ನಿಕಾ ಪರಮೇಶ್ವರಿ ಪ್ರದರ್ಶನವನ್ನು ಉದ್ಘಾಟಿಸಿ, ‘ಪ್ರದರ್ಶನದಲ್ಲಿ ಸಾಂಪ್ರದಾಯಿಕ ಶೈಲಿ ಮತ್ತು ವಿನ್ಯಾಸದ ವಜ್ರಾಭರಣಗಳಿದ್ದು, ಅವು ಆಕರ್ಷಕವಾಗಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.