ADVERTISEMENT

ಜೆ.ಪಿ ಪಾರ್ಕ್‌ನಲ್ಲಿ ಶಿರಡಿ ಸಾಯಿಬಾಬಾ ಜ್ಞಾನಮಂದಿರ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 18:38 IST
Last Updated 24 ಅಕ್ಟೋಬರ್ 2018, 18:38 IST
ಜೆ.ಪಿ ಪಾರ್ಕ್‍ನ ಮುತ್ಯಾಲನಗರ ಮೇಲ್ಸೇತುವೆ ಕೆಳಬಾಗದಲ್ಲಿ ಶಿರಡಿ ಸಾಯಿಬಾಬಾ ಜ್ಞಾನಮಂದಿರದ ಉದ್ಘಾಟನೆ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಶಾಸಕ ಮುನಿರತ್ನ, ಕೆ.ಸುನಂದಾ ಬೋರೇಗೌಡ, ಎಂ.ವೇಲುನಾಯ್ಕರ್ ಇದ್ದರು                                                                                                          
ಜೆ.ಪಿ ಪಾರ್ಕ್‍ನ ಮುತ್ಯಾಲನಗರ ಮೇಲ್ಸೇತುವೆ ಕೆಳಬಾಗದಲ್ಲಿ ಶಿರಡಿ ಸಾಯಿಬಾಬಾ ಜ್ಞಾನಮಂದಿರದ ಉದ್ಘಾಟನೆ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಶಾಸಕ ಮುನಿರತ್ನ, ಕೆ.ಸುನಂದಾ ಬೋರೇಗೌಡ, ಎಂ.ವೇಲುನಾಯ್ಕರ್ ಇದ್ದರು                                                                                                             

ಬೆಂಗಳೂರು: ಜೆ.ಪಿ ಪಾರ್ಕ್‍ನ ಮುತ್ಯಾಲನಗರ ಮೇಲ್ಸೇತುವೆ ಕೆಳಬಾಗದಲ್ಲಿ ₹ 1.50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಶಿರಡಿ ಸಾಯಿಬಾಬಾ ಜ್ಞಾನಮಂದಿರದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಅದ್ದೂರಿಯಾಗಿ ನಡೆಯಿತು. ಶಾಸಕ ಮುನಿರತ್ನ ಉದ್ಘಾಟನೆ ನೆರವೇರಿಸಿದರು.

‘ದೇಶದ ಸಂತರು, ಶರಣರು ಹಾಗೂ ದಾರ್ಶನಿಕರು ನೀಡಿಹೋದ ತತ್ವ, ಸಿದ್ಧಾಂತ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣದ ಕಡೆಗೆ ನಮ್ಮ ಆಲೋಚನೆಗಳು ಸಾಗಬೇಕಾಗಿದೆ’ ಎಂದರು.

ಸಮಿತಿಯ ಸದಸ್ಯೆ ಕೆ.ಸುನಂದಾ ಬೋರೇಗೌಡ ಮಾತನಾಡಿ, ‘ಹಲವಾರು ವರ್ಷಗಳಿಂದ ಈ ಭಾಗದ ಜನರು ಸಾಯಿಬಾಬಾ ದರ್ಶನಕ್ಕಾಗಿ ಮಲ್ಲೇಶ್ವರ ಹಾಗೂ ಆರ್.ಟಿ.ನಗರಕ್ಕೆ ತೆರಳಬೇಕಾಗಿತ್ತು. ಇದನ್ನರಿತ ಶಾಸಕರು ಸಾಯಿಬಾಬಾ ಜ್ಞಾನಮಂದಿರ ನಿರ್ಮಾಣ ಮಾಡುವ ಮೂಲಕ ಈ ಭಾಗದ ನಾಗರಿಕರು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಲು ಅನುಕೂಲ ಕಲ್ಪಿಸಿದ್ದಾರೆ’ ಎಂದರು.

ADVERTISEMENT

ಬಿಬಿಎಂಪಿ ಸದಸ್ಯರಾದ ಎಂ.ವೇಲುನಾಯ್ಕರ್, ಜಿ.ಕೆ.ವೆಂಕಟೇಶ್, ಮುಖಂಡರಾದ ಮೀನಮ್ಮ, ನಳಿನಿ ಕೃಷ್ಣಪ್ಪ, ರಾಜಾರೆಡ್ಡಿ, ರಫೀಕ್, ಸೋಮಶೇಖರ್, ರಾಜು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.