ಬೆಂಗಳೂರು: ಕೇರಳದಲ್ಲಿ ಜನಪ್ರಿಯವಾಗಿರುವ ಕಳರಿ ಸಮರ ಕಲೆಯನ್ನು ಕರಗತ ಮಾಡಿಕೊಂಡಿರುವ ಕನ್ನಡಿಗ ಎಸ್. ಸುದರ್ಶನ್ ದಾಖಲೆ ಬರೆದಿದ್ದಾರೆ.
ನಗರದ ಸುದರ್ಶನ್ ಅವರು 20 ವರ್ಷಗಳಿಂದ ದೇಶ–ವಿದೇಶಗಳಲ್ಲಿಕಳರಿ ಪ್ರದರ್ಶನ ನೀಡುತ್ತಿದ್ದಾರೆ. ಇದೀಗ ‘ಕಲರಿ ಸತ್ವಮ್’ ಹೆಸರಿನಲ್ಲಿ 90 ನಿಮಿಷ ನಿರಂತರವಾಗಿ ಪ್ರದರ್ಶನ ನೀಡಿದ್ದಾರೆ.
ಸುದರ್ಶನ್ ಅವರು ಕಿರಣ್ ಸುಬ್ರಹ್ಮಣ್ಯ ಹಾಗೂ ಸಂಧ್ಯಾ ಕಿರಣ್ ಬಳಿ ಭರತನಾಟ್ಯ ಅಭ್ಯಾಸ ಮಾಡಿದ್ದರು. ಬಳಿಕಕೇರಳ ಮೂಲದ ರಂಜನ್ ಮುಲ್ಲರತ್ ಅವರ ಬಳಿ ಕಳರಿ ಕಲೆಯನ್ನು ಕಲಿತರು. ಇದೀಗ ‘ಕಳರಿ ಗುರುಕುಲಂ’ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.