ADVERTISEMENT

ಪೊಲೀಸ್ ನೇಮಕಾತಿ ವಿಭಾಗದಿಂದ ಕಮಲ್ ಪಂತ್ ವರ್ಗ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2023, 15:30 IST
Last Updated 31 ಡಿಸೆಂಬರ್ 2023, 15:30 IST
<div class="paragraphs"><p> ಕಮಲ್ ಪಂತ್ </p></div>

ಕಮಲ್ ಪಂತ್

   

ಬೆಂಗಳೂರು: ಪೊಲೀಸ್ ನೇಮಕಾತಿ ವಿಭಾಗದ ಡಿಜಿಪಿಯಾಗಿದ್ದ ಕಮಲ್‌ ಪಂತ್ ಅವರನ್ನು ಅಗ್ನಿಶಾಮಕ ದಳಕ್ಕೆ ವರ್ಗಾವಣೆ ಮಾಡಲಾಗಿದೆ. ನೇಮಕಾತಿ ವಿಭಾಗದ ಹೆಚ್ಚುವರಿ ಹೊಣೆಯನ್ನು ಅವರಿಗೆ ವಹಿಸಲಾಗಿದೆ.

ಮಂಗಳೂರು ಪಶ್ಚಿಮ ವಲಯದ ಡಿಐಜಿ ಆಗಿದ್ದ ಡಾ. ಚಂದ್ರಗುಪ್ತ ಅವರನ್ನು ಅಪರಾಧ ವಿಭಾಗದ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯದ ಡಿಐಜಿಯಾಗಿದ್ದ ವೈ.ಎಸ್. ರವಿಕುಮಾರ್ ಅವರನ್ನು ಭದ್ರತೆ (ಗುಪ್ತಚರ) ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. 

ADVERTISEMENT

ವರ್ಗಾವಣೆಯಾದವರು:

ಅಲೋಕ್ ಕುಮಾರ್–ವಿಶೇಷ ಆಯುಕ್ತ, ಕರ್ನಾಟಕ ರಸ್ತೆ ಸುರಕ್ಷತಾ ಪ್ರಾಧಿಕಾರ.
ಸೀಮಂತ್ ಕುಮಾರ್ ಸಿಂಗ್–ಎಡಿಜಿಪಿ, ಬಿಎಂಟಿಎಫ್, ಹರಿಶೇಖರನ್ –ಎಡಿಜಿಪಿ, ಗೃಹ ರಕ್ಷಕ ದಳ ಹಾಗೂ ನಾಗರಿಕ ಭದ್ರತೆ. ಎಂ.ನಂಜುಂಡಸ್ವಾಮಿ– ಎಡಿಜಿಪಿ, ಅಗ್ನಿಶಾಮಕ ದಳ ಹಾಗೂ ಎಸ್‌ಡಿಆರ್‌ಪಿ. ಡಾ.ಕೆ. ತ್ಯಾಗರಾಜನ್, ಐಜಿಪಿ, ಪೂರ್ವ ವಲಯ, ದಾವಣಗೆರೆ. ಅಮಿತ್ ಸಿಂಗ್ –ಡಿಐಜಿ, ಪಶ್ಚಿಮ ವಲಯ.  ಶಂತನು ಸಿಂಹ-ಡಿಐಜಿ, ಕೇಂದ್ರ ಸೇವೆ. ಡಾ.ದಿವ್ಯಾ ವಿ. ಗೋಪಿನಾಥ್–ಡಿಐಜಿ, ಎಫ್‌ಎಸ್‌ಎಲ್ ವಿಭಾಗ. ಸುಧೀರ್ ಕುಮಾರ್ ರೆಡ್ಡಿ, ಡಿಐಜಿ, ಅರಣ್ಯ ಘಟಕ. ಆರ್.ಚೇತನ್ –ಡಿಐಜಿ –ಪೊಲೀಸ್ ಕಮಿಷನರ್, ಕಲಬುರಗಿ.

ವರ್ತಿಕಾ ಕಟಿಯಾರ್ –ಡಿಐಜಿ, ಆಂತರಿಕಾ ಭದ್ರತಾ ವಿಭಾಗ. ಕಾರ್ತಿಕ್ ರೆಡ್ಡಿ–ಎಸ್‌ಪಿ, ರಾಮನಗರ.
ಕುಲದೀಪ್ ಕುಮಾರ್ ಆರ್. ಜೈನ್–ಸಂಚಾರ ಪೂರ್ವ ವಿಭಾಗ, ಬೆಂಗಳೂರು. ಕೆ.ಸಂತೋಷ್ ಬಾಬು– ಡಿಸಿಪಿ, ಆಡಳಿತ, ಬೆಂಗಳೂರು.

ಡಿ.ಆರ್.ಸಿರಿಗೌರಿ-ಡಿಸಿಪಿ, ಉತ್ತರ. ಎಂ.ಪುಟ್ಟಮಾದಯ್ಯ- ಎಸ್‌ಪಿ, ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯ. ಟಿ.ಶ್ರೀಧರ್-ಎಐಜಿಪಿ, ಪೊಲೀಸ್ ಪ್ರಧಾನ ಕಚೇರಿ. ಡಾ.ಸಂಜೀವ್ ಎಂ ಪಾಟೀಲ್-ಎಐಜಿಪಿ, ಪ್ರಧಾನ ಕಚೇರಿ. ಡಾ.ಸುಮನಾ ಡಿ. ಪೆನ್ನೇಕರ್-ಎಐಜಿಪಿ, ಹೆಡ್ ಕ್ವಾಟರ್ಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.