ADVERTISEMENT

ಬೆಂಗಳೂರು ಉಪ ನಗರ ರೈಲು ಯೋಜನೆ ‘ಕನಕ ಮಾರ್ಗ’: ಟೆಂಡರ್‌ನಲ್ಲಿ ನಾಲ್ಕು ಕಂಪನಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2023, 23:30 IST
Last Updated 4 ಜುಲೈ 2023, 23:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಉಪ ನಗರ ರೈಲು ಯೋಜನೆಯ ಬಹುನಿರೀಕ್ಷಿತ ಕಾರಿಡಾರ್ ಹೀಲಳಿಗೆ- ರಾಜಾನುಕುಂಟೆ ನಡುವಿನ ‘ಕನಕ ಮಾರ್ಗ’ದ ನಿರ್ಮಾಣಕ್ಕೆ ನಾಲ್ಕು ಕಂಪನಿಗಳು ಮುಂದಾಗಿವೆ. ಮಂಗಳವಾರ ನಡೆದ ಟೆಂಡರ್‌ನ ಬಿಡ್‌ನಲ್ಲಿ ಒಟ್ಟು ನಾಲ್ಕು ಕಂಪನಿಗಳು ಭಾಗಿಯಾಗಿದ್ದವು.

ಒಟ್ಟು 46.88 ಕಿ.ಮೀ ಉದ್ದದ ಈ ಕಾರಿಡಾರ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿತ್ತು.

ಎಲ್ ಅಂಡ್‌ ಟಿ ಕಂಪನಿ, ಆಫ್ಕಾನ್ಸ್‌ ಇನ್ಪಾಸ್ಟ್ರಕ್ಚರ್‌ ಸಂಸ್ಥೆ, ಇಂಟಾರ್ವೊ ಟೆಕ್ನಾಲಜೀಸ್ ಕಂಪನಿ, ದಿನೇಶ್ ಚಂದ್ರ ಆರ್ ಅಗರ್‌ವಾಲ್ ಇನ್ಪಾಸ್ಟ್ರಕ್ಚರ್‌ ಕಂಪೆನಿಗಳು ಆಸಕ್ತಿ ತೋರಿಸಿವೆ ಎಂದು ಕೆ-ರೈಡ್ (ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ) ತಿಳಿಸಿದೆ.

ADVERTISEMENT

ಎಂಜಿನಿಯರಿಂಗ್, ಪ್ರೊಕ್ಯುರ್‌ಮೆಂಟ್ ಮತ್ತು ಕನ್‌ಸ್ಟ್ರಕ್ಷನ್ ಒಳಗೊಂಡ ‘ಇಪಿಸಿ’ ಮಾದರಿಯಲ್ಲಿ ಟೆಂಡರ್ ಕರೆಯಲಾಗಿದೆ. 37.92 ಕಿ.ಮೀ ಗ್ರೇಡ್‌ ಸೆಕ್ಷನ್‌ ಹೊಂದಿರುವ ಮಾರ್ಗದಲ್ಲಿ 8.96 ಕಿ.ಮೀ ಎತ್ತರಿಸಿದ ಮಾರ್ಗವಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.