ಬೆಂಗಳೂರು: ‘ಕನಕದಾಸರ ಜಯಂತಿ ಆಚರಣೆ ಸಂದರ್ಭದಲ್ಲಿ ಸಂಪುಟ ಸಂಚಾಲಕರನ್ನು ವೇದಿಕೆಗೆ ಬರಮಾಡಿಕೊಳ್ಳದೆ ಪ್ರಮಾದವಾಗಿದೆ. ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ಸಂತ ಕವಿ ಕನಕದಾಸರು ಮತ್ತು ತತ್ವ ಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ತಿಳಿಸಿದ್ದಾರೆ.
‘ಅಂದು ಕಾರ್ಯಕ್ರಮದಲ್ಲಿ 18 ಸಂಪುಟಗಳನ್ನು ಬಿಡುಗಡೆ ಮಾಡಲಾಗಿತ್ತು. ಸಂಪುಟಗಳ ಸಂಪಾದಕರಿಗೆ ಮುಖ್ಯಮಂತ್ರಿಯವರ ಮೂಲಕ ಗೌರವ ಪ್ರತಿ ನೀಡಲಾಗಿತ್ತು. ಅದರಲ್ಲಿ ಒಂದು ಕೃತಿಯ ಸಂಪಾದಕರಾದ ಗಂಗಪ್ಪ ತಳವಾರ್ ಅವರ ಹೆಸರನ್ನು ಕರೆದಿರಲಿಲ್ಲ. ಅದು ಉದ್ದೇಶಪೂರ್ವಕವಾಗಿ ಬಿಟ್ಟಿದ್ದಲ್ಲ. ಅಧ್ಯಯನ ಕೇಂದ್ರದ ಪ್ರಮಾದದಿಂದ ಸಂಭವಿಸಿದೆ. ಲೇಖಕರನ್ನು ಕಾರ್ಯಕ್ರಮಕ್ಕೆ ಅಧಿಕೃತವಾಗಿ ಆಹ್ವಾನಿಸಲಾಗಿದ್ದು, ವೇದಿಕೆಗೆ ಬರಮಾಡಿಕೊಳ್ಳದೆ ಹೋಗಿರುವುದು ನನಗೆ ಬೇಸರವಾಗಿದೆ’ ಎಂದು ಅವರು ಹೇಳಿಕೆ ಮೂಲಕ ವಿಷಾದ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.