ADVERTISEMENT

ಕನ್ನಡ ಕಲಿಕೆಗೆ ಅನ್ಯ ಭಾಷಿಕರಿಂದ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 14:45 IST
Last Updated 4 ಜುಲೈ 2024, 14:45 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಕಲಿಕೆಗಾಗಿ ಅನ್ಯ ಭಾಷಿಕರಿಂದ ಅರ್ಜಿ ಆಹ್ವಾನಿಸಿದೆ.

ಈಗಾಗಲೇ ನಡೆಸುತ್ತಿರುವ ಕನ್ನಡ ಕಲಿಕಾ ಕೇಂದ್ರಗಳ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ಖಾಸಗಿ ವಲಯ, ಅಪಾರ್ಟ್‌ಮೆಂಟ್, ವೈದ್ಯಕೀಯ ಕಾಲೇಜುಗಳು ಹಾಗೂ ಇತರ ಸಂಸ್ಥೆಯವರಿಗೆ ಕನ್ನಡಿಗರೊಂದಿಗೆ ಸಂವಹನ ನಡೆಸಲು ಅನುಕೂಲವಾಗುವಂತೆ ಅನ್ಯ ಭಾಷಿಕರಿಗೆ ಸಂಜೆ ಸಮಯದಲ್ಲಿ ಕನ್ನಡ ಕಲಿಸಲಾಗುವುದು. ಇದಕ್ಕಾಗಿ ಸಂವಹನ ಕೇಂದ್ರಿತವಾದ ಹೊಸ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ. 

ADVERTISEMENT

ಕನ್ನಡ ಕಲಿಕಾ ಕೇಂದ್ರಗಳಲ್ಲಿ ಕನ್ನಡ ಕಲಿಸಲು ಇಚ್ಛಿಸುವವರು ತಮ್ಮ ಸ್ವವಿವರವನ್ನು 15 ದಿನಗಳೊಳಗೆ ಕಾರ್ಯದರ್ಶಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕೊಠಡಿ ಸಂಖ್ಯೆ–263, 2ನೇ ಮಹಡಿ, ವಿಧಾನಸೌಧ, ಬೆಂಗಳೂರು-01 ಈ ವಿಳಾಸಕ್ಕೆ, ಇಲ್ಲವೇ ಇ–ಮೇಲ್ secretary.kanpra@gmail.comಗೆ ಅಥವಾ chairman.kanpra@gmail.comಗೆ ಕಳುಹಿಸಬಹುದು. ಆಯ್ದ ಅಭ್ಯರ್ಥಿಗಳಿಗೆ ಪ್ರಾಧಿಕಾರದಿಂದ ತರಬೇತಿ ನೀಡಲಾಗುವುದು ಎಂದು ಪ್ರಕಟಣೆ ಹೇಳಿದೆ. 

ಸಂಪರ್ಕಕ್ಕೆ ದೂರವಾಣಿ ಸಂಖ್ಯೆ: 080 22286773

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.