ADVERTISEMENT

ಭಾಷೆ ಬಗ್ಗೆ ನಿರ್ಲಕ್ಷ್ಯ ಸಲ್ಲ: ಪಿನಾಕಪಾಣಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 15:07 IST
Last Updated 23 ನವೆಂಬರ್ 2024, 15:07 IST
ರಾಜಾಜಿನಗರದ ಆರ್‌ಪಿಎ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಮತ್ತು ರಂಗಕರ್ಮಿ ಲೋಕೇಶ್ ಅವರನ್ನು ಅಭಿನಂದಿಸಲಾಯಿತು. ಸಂಸ್ಥೆ ಅಧ್ಯಕ್ಷ ಮೃತ್ಯುಂಜಯ ಹಾಗೂ ಪದಾಧಿಕಾರಿಗಳು ಹಾಜರಿದ್ದರು
ರಾಜಾಜಿನಗರದ ಆರ್‌ಪಿಎ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಮತ್ತು ರಂಗಕರ್ಮಿ ಲೋಕೇಶ್ ಅವರನ್ನು ಅಭಿನಂದಿಸಲಾಯಿತು. ಸಂಸ್ಥೆ ಅಧ್ಯಕ್ಷ ಮೃತ್ಯುಂಜಯ ಹಾಗೂ ಪದಾಧಿಕಾರಿಗಳು ಹಾಜರಿದ್ದರು   

ಬೆಂಗಳೂರು: ‘ವಿಶಾಲ ಭಾಷಿಗರಾದ ಕನ್ನಡಿಗರು ಇದೀಗ ಅಭಿಮಾನದ ಅಭಿರುಚಿ ಬೆಳೆಸಿಕೊಳ್ಳಬೇಕಾಗಿದೆ. ತಮ್ಮ ಭಾಷೆ ಬಗ್ಗೆ ದಿವ್ಯ ನಿರ್ಲಕ್ಷ್ಯ ತಳೆದು, ಅನ್ಯ ಭಾಷೆ, ಸಂಸ್ಕೃತಿಗಳಿಗೆ ಮಾರುಹೋಗುತ್ತಿರುವುದು ದುರದೃಷ್ಟಕರ’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ವಿಷಾದಿಸಿದರು.

ರಾಜಾಜಿನಗರದ ಆರ್‌ಪಿಎ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕನ್ನಡ ಭಾಷೆಯ ಇತಿಹಾಸ ಅತ್ಯಂತ ಪ್ರಾಚೀನವಾಗಿದ್ದು, ಭಾರತದ ಮೊದಲ ನಾಗರಿಕತೆಯ ಹರಪ್ಪಾದಲ್ಲೇ ಕನ್ನಡವಿದೆ. ಹರಪ್ಪ ಪದವನ್ನು ಬಿಡಿಸಿದರೆ ಹರ ಮತ್ತು ಅಪ್ಪ ಎರಡೂ ಅಚ್ಚ ಕನ್ನಡ ಪದಗಳಾಗಿವೆ. ದ್ರಾವಿಡ ಸಂಸ್ಕೃತಿ ಭರತಖಂಡದ ಮೂಲವಾಗಿದ್ದು ಕನ್ನಡವು ಇದರ ನಿಜ ಉತ್ತರಾಧಿಕಾರಿ. ಕನ್ನಡದ ರಾಜ ಮನೆತನಗಳು ಗುಜರಾತ್, ವೆಂಗಿ, ಬಂಗಾಳ, ಉತ್ತರ ಭಾರತದ ಹಲವೆಡೆ ರಾಜ್ಯ ಕಟ್ಟಿದವರು. ನೇಪಾಳದಲ್ಲಿಯೂ ಕನ್ನಡದ ಕುರುಹುಗಳಿವೆ’ ಎಂದು ವಿವರಿಸಿದರು.

ADVERTISEMENT

‘ಕನ್ನಡದ ವೀರರು - ಕವಿಪುಂಗವರನ್ನು ಜಾತಿ ಮೂಲಗಳಿಂದ ಹುಡುಕುತ್ತಿರುವುದು ಬೇಸರದ ಸಂಗತಿ. ಗಂಗರನ್ನು ಶೈವ-ಜೈನ-ಒಕ್ಕಲಿಗರಾಗಿ ಕಾಣುವುದು, ವಿಜಯನಗರದ ಸಂಗಮ ವಂಶಸ್ಥರನ್ನು ಹಾಲು ಮತಸ್ಥರು - ವೀರಶೈವರು ತಮ್ಮವರೆಂದು ಭಾವಿಸುವುದು, ಬಸವಣ್ಣ - ಕನಕ - ಸಂಗೊಳ್ಳಿರಾಯಣ್ಣರನ್ನು ತಮ್ಮ ತಮ್ಮವರೆಂದು ಗುರುತಿಸುವುದೇ ತಪ್ಪು’ ಎಂದರು.

ಸಂಸ್ಥೆಯ ಅಧ್ಯಕ್ಷ ಮೃತ್ಯುಂಜಯ ಮಾತನಾಡಿ, ‘ರಾಜಧಾನಿಯಲ್ಲಿ ಕನ್ನಡವನ್ನು ಉಳಿಸಿ ಬೆಳೆಸಬೇಕಾದ್ದು ವಿದ್ಯಾರ್ಥಿಗಳ ಕರ್ತವ್ಯ. ತಮ್ಮ ಸಂಸ್ಥೆಯ ದೈನಂದಿನ ವ್ಯವಹಾರದಲ್ಲಿ ಕನ್ನಡವನ್ನು ಆದ್ಯತೆಯಾಗಿ ಬಳಸಿ, ಕನ್ನಡ ಚಟುವಟಿಕೆಗಳಿಗೆ ಸಂಸ್ಥೆ ಸದಾ ಪ್ರೋತ್ಸಾಹಿಸುತ್ತಿದೆ’ ಎಂದು ತಿಳಿಸಿದರು.

ಸಂಸ್ಥೆ ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಕಾರ್ಯದರ್ಶಿ ನಟರಾಜ್ ಸಾಗರನಹಳ್ಳಿ, ಖಜಾಂಚಿ ದೇವರಸೇಗೌಡ, ಜಂಟಿ ಕಾರ್ಯದರ್ಶಿ ಮೃತ್ಯುಂಜಯಸ್ವಾಮಿ, ನಿರ್ದೇಶಕಿ ಗೀತಾಶೆಟ್ಟಿ, ವಚನಜ್ಯೋತಿ ಬಳಗದ ಪ್ರಧಾನ ಕಾರ್ಯದರ್ಶಿ ಪ್ರಭು ಇಸುವನಹಳ್ಳಿ, ರಂಗಕರ್ಮಿ ಲೋಕೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.