ADVERTISEMENT

ಯಲಹಂಕ | ಶೇಷಾದ್ರಿಪುರ ಕಾಲೇಜಿನಲ್ಲಿ ‘ಕನ್ನಡ ನಾಡಹಬ್ಬʼದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 16:01 IST
Last Updated 19 ನವೆಂಬರ್ 2024, 16:01 IST
ವಿದ್ಯಾರ್ಥಿಗಳು ಸಿದ್ಧಪಡಿಸಿ ಪ್ರದರ್ಶನ ಮತ್ತು ಮಾರಾಟಕ್ಕಿಟ್ಟಿದ್ದ ಆಹಾರ ಖಾದ್ಯಗಳನ್ನು ವಿಮರ್ಶಕಿ ಆಶಾದೇವಿ ಹಾಗೂ ಶಿಕ್ಷಣತಜ್ಞ ವೂಡೇ.ಪಿ.ಕೃಷ್ಣ ವೀಕ್ಷಿಸಿದರು
ವಿದ್ಯಾರ್ಥಿಗಳು ಸಿದ್ಧಪಡಿಸಿ ಪ್ರದರ್ಶನ ಮತ್ತು ಮಾರಾಟಕ್ಕಿಟ್ಟಿದ್ದ ಆಹಾರ ಖಾದ್ಯಗಳನ್ನು ವಿಮರ್ಶಕಿ ಆಶಾದೇವಿ ಹಾಗೂ ಶಿಕ್ಷಣತಜ್ಞ ವೂಡೇ.ಪಿ.ಕೃಷ್ಣ ವೀಕ್ಷಿಸಿದರು   

ಯಲಹಂಕ: ಕೆಂಪು ಮತ್ತು ಹಳದಿ ಬಣ್ಣದ ಕಾಗದ ಮತ್ತು ಬಟ್ಟೆಗಳು, ಚಿತ್ತಾರದ ರಂಗೋಲಿ, ವಿವಿಧ ಬಗೆಯ ಹೂವು ಮತ್ತು ತಳಿರು-ತೋರಣಗಳಿಂದ ಕಂಗೊಳಿಸುತ್ತಿದ್ದ ಕಾಲೇಜು ಆವರಣ, ವಿವಿಧ ಮಾದರಿಗಳ ಪ್ರದರ್ಶನ, ಆಹಾರ ಖಾದ್ಯ‌ಗಳ ಮಾರಾಟ, ವಿವಿಧ ಉಡುಪುಗಳೊಂದಿಗೆ ಕಂಗೊಳಿಸುತ್ತಿದ್ದ ವಿದ್ಯಾರ್ಥಿಗಳು, ತೇಲಿ ಬರುತ್ತಿದ್ದ ಕನ್ನಡ ಗೀತೆಗಳಿಗೆ ಹೆಜ್ಜೆಹಾಕಿದ ಯುವಜನತೆ....

ಇಲ್ಲಿನ ಶೇಷಾದ್ರಿಪುರ ಪ್ರಥಮದರ್ಜೆ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ‘ನಾಡಹಬ್ಬ-2024‘ರ ಸಮಾರಂಭದ ದೃಶ್ಯಗಳಿವು.

ವಿದ್ಯಾರ್ಥಿಗಳು ತಯಾರಿಸಿದ್ದ ವಿಧಾನಸೌಧ, ಮೈಸೂರು ಅರಮನೆ, ಚಾಮುಂಡಿ ದೇವಾಲಯ, ಶಿವನ ಮೂರ್ತಿ, ಕನ್ನಡ ನಟ-ನಟಿಯರ ʼಚಂದನವನʼ, ಗೋಲಗುಮ್ಮಟ, ಚಂದ್ರಯಾನ-3, ಕೆ.ಆರ್‌.ಎಸ್‌, ಬಿಡಿಎ, ಕೃಷಿ ಕರ್ನಾಟಕ, ಪುಸ್ತಕ ಪ್ರದರ್ಶನ, ತುಮಕೂರು ಜಿಲ್ಲೆ ಮತ್ತಿತರ ಮಾದರಿಗಳು ಜನರ ಗಮನ ಸೆಳೆದವು. ವಿದ್ಯಾರ್ಥಿಗಳು ತಾವೇ ತಯಾರಿಸಿದ್ದ ಆಹಾರ ಖಾದ್ಯಗಳು, ಚಾಟ್ಸ್‌ ಹಾಗೂ ತಿಂಡಿ-ತಿನಿಸುಗಳನ್ನು ಮಾರಾಟಮಾಡಿ ಖುಷಿಪಟ್ಟರು. ಅಲ್ಲದೆ ದೇಸೀ ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಮರ್ಶಕಿ ಡಾ.ಆಶಾದೇವಿ, ಕನ್ನಡ ಕೇವಲ ಒಂದು ಭಾಷೆಯಾಗಿರದೆ ಜೀವನಕ್ರಮವಾಗಿದ್ದು, ಇಡೀ ಬದುಕನ್ನು ಆವರಿಸಿದೆ’ ಎಂದರು.

ಶಿಕ್ಷಣತಜ್ಞ ವೂಡೇ.ಪಿ.ಕೃಷ್ಣ ಮಾತನಾಡಿದರು. ಪ್ರಾಂಶುಪಾಲ ಎಸ್‌.ಎನ್‌.ವೆಂಕಟೇಶ್‌, ಆಂತರಿಕ ಗುಣಮಟ್ಟ ಭರವಸೆ ಸಮಿತಿ ಸಂಚಾಲಕ ಎಂ.ಎಲ್‌.ಅಶೋಕ್‌, ಇಂಗ್ಲಿಷ್‌ ಮತ್ತು ಕನ್ನಡ ವಿಭಾಗಗಳ ಮುಖ್ಯಸ್ಥರಾದ ಪವಿತ್ರಕುಮಾರಿ.ಬಿ.ಪಿ, ಗೀತಾ.ಡಿ.ಸಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.