ADVERTISEMENT

ಕಲಾವಿದರ ಕನಸುಗಳಿಗೆ ಜೀವ ತುಂಬುತ್ತಿದೆ ಪರಿಷತ್‌: ಎಸ್‌.ಬಾಲಾಜಿ

ಕನ್ನಡ ಜಾನಪದ ಪರಿಷತ್ ದಾಸರಹಳ್ಳಿ ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 15:08 IST
Last Updated 4 ಸೆಪ್ಟೆಂಬರ್ 2024, 15:08 IST
ಕಾರ್ಯಕ್ರಮದಲ್ಲಿ ಎಸ್‌.ಬಾಲಾಜಿ ಮಾತನಾಡಿದರು. ಜನಪದ ಸಂಶೋಧಕ ಚಿಕ್ಕ ಹೆಜ್ಜಾಜಿ ಮಹಾದೇವ್ ದಾಸರಹಳ್ಳಿ ಕ್ಷೇತ್ರ ಘಟಕದ ಅಧ್ಯಕ್ಷ ವೈ.ಬಿ.ಎಚ್.ಜಯದೇವ್, ಚಿತ್ರನಟಿ ಅಭಿನಯ, ಅಸೆಂಟ್ ಕಾಲೇಜು ಪ್ರಾಚಾರ್ಯ ಬಿ.ಎಂ.ವೆಂಕಟೇಶ್, ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಿಯಾಜ್ ಪಾಷ, ಉಪನ್ಯಾಸಕಿ ಶ್ವೇತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಎಸ್‌.ಬಾಲಾಜಿ ಮಾತನಾಡಿದರು. ಜನಪದ ಸಂಶೋಧಕ ಚಿಕ್ಕ ಹೆಜ್ಜಾಜಿ ಮಹಾದೇವ್ ದಾಸರಹಳ್ಳಿ ಕ್ಷೇತ್ರ ಘಟಕದ ಅಧ್ಯಕ್ಷ ವೈ.ಬಿ.ಎಚ್.ಜಯದೇವ್, ಚಿತ್ರನಟಿ ಅಭಿನಯ, ಅಸೆಂಟ್ ಕಾಲೇಜು ಪ್ರಾಚಾರ್ಯ ಬಿ.ಎಂ.ವೆಂಕಟೇಶ್, ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಿಯಾಜ್ ಪಾಷ, ಉಪನ್ಯಾಸಕಿ ಶ್ವೇತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.   

ಪೀಣ್ಯ ದಾಸರಹಳ್ಳಿ: ಇಲ್ಲಿನ ಹಾವನೂರು ಬಡಾವಣೆಯ ಅಸೆಂಟ್‌ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಜಾನಪದ ಪರಿಷತ್‌ ದಾಸರಹಳ್ಳಿ ಘಟಕವನ್ನು ಪರಿಷತ್‌ ಸಂಸ್ಥಾಪಕ ಮತ್ತು ರಾಜ್ಯ ಘಟಕದ ಅಧ್ಯಕ್ಷ ಎಸ್‌.ಬಾಲಾಜಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ನಮ್ಮ ಪರಿಷತ್ತು ರಾಜ್ಯದಾದ್ಯಂತ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ವೈವಿಧ್ಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಸ್ಥಳೀಯ ಜನಪದ ಕಲಾವಿದರ ಕನಸುಗಳಿಗೆ ಜೀವ ತುಂಬುತ್ತಿದೆ' ಎಂದು ಹೇಳಿದರು.

ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ಅಧ್ಯಕ್ಷ ಬಿ.ಎಂ.ಚಿಕ್ಕಣ್ಣ, ‘ಸರ್ಕಾರ ಜಾನಪದ ಕಲಾವಿದರಿಗೆ ಪ್ರೋತ್ಸಾಹ ನೀಡಿ, ಜನಪದ ಕಲೆ, ಸಂಸ್ಕೃತಿ, ಪರಂಪರೆಯನ್ನು ಉಳಿಸುವ ಕೆಲಸ ಮಾಡಬೇಕು' ಎಂದು ಒತ್ತಾಯಿಸಿದರು.

ADVERTISEMENT

ಜನಪದ ಸಂಶೋಧಕ  ಚಿಕ್ಕ ಹೆಜ್ಜಾಜಿ ಮಹಾದೇವ್ ಅವರು ಜನಪದ ಪ್ರಕಾರಗಳಾದ ಗಾಯನ, ನೃತ್ಯ, ಗಾದೆ ಮತ್ತು ಒಗಟುಗಳ ಬಗ್ಗೆ ವಿಶ್ಲೇಷಿಸಿದರು. ಕಾಲೇಜಿನ ಉಪನ್ಯಾಸಕ ಡಿ.ಬಿ.ಚಿಕ್ಕವೀರಯ್ಯ ಅವರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಬರೆದ 'english study material' ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಸಮಾರಂಭದಲ್ಲಿ ರಾಮನಗರದ ಜಾನಪದ ಕಲಾತಂಡದವರು ಡೊಳ್ಳು ಕುಣಿತ, ನೆಲಮಂಗಲದ ಸೂಲಗಿತ್ತಿ ಅಕ್ಕ ಮಾರಮ್ಮ ಸೇವಾ ಟ್ರಸ್ಟ್‌ನವರು ಸೋಬಾನೆ ಪದಗಳನ್ನು ಪ್ರಸ್ತುತಪಡಿಸಿದರು. ಜನಪದ ಗಾಯಕರಾದ ಜೋಗಿಲ ಸಿದ್ದರಾಜು ಮತ್ತು ಕುಣಿಗಲ್ ರಾಮಚಂದ್ರ ಅವರು ಜಾನಪದ ಗೀತೆಗಳನ್ನು ಹಾಡಿದರು. ಭೂಮಿಕಾ ಸೇವಾ ಫೌಂಡೇಶನ್ ಮತ್ತು ಆಸೆಂಟ್ ಕಾಲೇಜಿನ ವಿದ್ಯಾರ್ಥಿಗಳು ಜಾನಪದ ಗೀತೆಗಳಿಗೆ ನೃತ್ಯ ಪ್ರದರ್ಶನ ಮಾಡಿದರು.

ಕತೆಗಾರ ಕಂನಾಡಿಗಾ ನಾರಾಯಣ, ಸಮಾಜ ಸೇವಕ ಸಂಗನ ಬಸಪ್ಪ ಬಿರಾದಾರ್, ನಾಗಸಂದ್ರ ರೋಟ್ರ್ಯಾಕ್ ಕ್ಲಬ್ ಅಧ್ಯಕ್ಷ ರಂಜಿತ್ ದಯಾನಂದ್, ಪದಾಧಿಕಾರಿಗಳಾದ ಗೌರವ ಅಧ್ಯಕ್ಷ ರಾಜೇಂದ್ರ ಕೊಣ್ಣೂರ, ಖಜಾಂಚಿ ಕೃಷ್ಣಮೂರ್ತಿ ಎನ್.ಡಿ ಅವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.