ADVERTISEMENT

ಅನ್ಯಭಾಷಿಕರಿಗೆ ಕನ್ನಡ ಕಲಿಕಾ ಅಭಿಯಾನ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2018, 18:43 IST
Last Updated 9 ಅಕ್ಟೋಬರ್ 2018, 18:43 IST
ಅನ್ಯಭಾಷಿಕರಿಗೆ ಕನ್ನಡ ಕಲಿಕಾ ಅಭಿಯಾನದಲ್ಲಿ ಸಾಹಿತಿ ಡಾ.ಚಿಕ್ಕಹೆಜ್ಜಾಜಿ ಮಹದೇವ್ ಉಪನ್ಯಾಸ ನೀಡಿದರು.
ಅನ್ಯಭಾಷಿಕರಿಗೆ ಕನ್ನಡ ಕಲಿಕಾ ಅಭಿಯಾನದಲ್ಲಿ ಸಾಹಿತಿ ಡಾ.ಚಿಕ್ಕಹೆಜ್ಜಾಜಿ ಮಹದೇವ್ ಉಪನ್ಯಾಸ ನೀಡಿದರು.   

ಬೆಂಗಳೂರು: ‘ನಾವು ಎಲ್ಲಿರುತ್ತೇವೆಯೋ ಅಲ್ಲಿನ ನೆಲದ ಭಾಷೆ, ಸಂಸ್ಕೃತಿಯನ್ನು ಕಲಿತು ವ್ಯವಹರಿಸಿದರೆ ತುಂಬಾ ಒಳ್ಳೆಯದು' ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ದ್ವಾರನಕುಂಟೆ ಪಾತಣ್ಣ ಹೇಳಿದರು.

ಪೀಣ್ಯದಾಸರಹಳ್ಳಿ ಸಮೀಪ ಮಲ್ಲಸಂದ್ರದ ಜಾಕ್ ಆ್ಯಂಡ್‌ ಜಿಲ್ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಮಲ್ಲಸಂದ್ರ ಘಟಕ ವತಿಯಿಂದ ಆಯೋಜಿಸಿದ್ದ ಅನ್ಯಭಾಷಿಕರಿಗೆ ಕನ್ನಡ ಕಲಿಕಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

'ಇತರ ಭಾಷೆಯನ್ನು ಕಲಿತರೆ ಅದು ನಮಗೆ ಉಪಯೋಗ. ಉದಾಹರಣೆಗೆ ಮಾಜಿ ಪ್ರಧಾನಿ ದಿವಂಗತ ಪಿ.ವಿ.ನರಸಿಂಹರಾವ್ 18 ಭಾಷೆ ಕಲಿತಿದ್ದರು. ಪ್ರಾಧಿಕಾರದಿಂದ ಸಿಗುವ ಅನೇಕ ಸವಲತ್ತುಗಳನ್ನು ನೀವು ಸದುಪಯೋಗ ಪಡೆದುಕೊಳ್ಳಿ' ಎಂದರು.

ADVERTISEMENT

ಸಾಹಿತಿ ಡಾ.ಚಿಕ್ಕಹೆಜ್ಜಾಜಿ ಮಹದೇವ್ ಮಾತನಾಡಿ 'ಅನ್ಯಭಾಷಿಕರಿಗೆ ಕನ್ನಡ ಕಲಿಸುವುದರ ಮೂಲಕ ನಮ್ಮ ಭಾಷೆ, ನೆಲ, ಜಲ ಹಾಗೂ ಸಂಸ್ಕೃತಿಯನ್ನು ತಿಳಿಸಿಕೊಡಬಹುದು' ಎಂದರು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವೈ.ಬಿ.ಎಚ್.ಜಯದೇವ್, ಕನ್ನಡ ಸಾಹಿತ್ಯ ಪರಿಷತ್ತು ಮಲ್ಲಸಂದ್ರ ಘಟಕ ಅಧ್ಯಕ್ಷ ಪಿ.ಎಸ್.ಪ್ರದೀಪ್, ಪದಾಧಿಕಾರಿಗಳಾದ ತೀರ್ಥ ಮಲ್ನಾಡ್, ಸುರೇಶ್, ಚಂದ್ರಶೇಖರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.