ADVERTISEMENT

ಬೆಂಗಳೂರು: ‘ಬಹುತ್ವ ಭಾರತ’ ಕೃತಿಗೆ ‘ಸಾಹಿತ್ಯ ರತ್ನ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 15:35 IST
Last Updated 12 ಜೂನ್ 2024, 15:35 IST
<div class="paragraphs"><p> ಎನ್. ಜಗದೀಶ್ ಕೊಪ್ಪ</p></div>

ಎನ್. ಜಗದೀಶ್ ಕೊಪ್ಪ

   

ಬೆಂಗಳೂರು: ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘವು 2023ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, , ‘ಸಾಹಿತ್ಯ ರತ್ನ ಪ್ರಶಸ್ತಿ’ಗೆ ಲೇಖಕ ಎನ್. ಜಗದೀಶ್ ಕೊಪ್ಪ ಅವರ ‘ಬಹುತ್ವದ ಭಾರತ’ ಕೃತಿ ಆಯ್ಕೆಯಾಗಿದೆ.

‘ಯುವ ಸಾಹಿತ್ಯ ರತ್ನ ಪ್ರಶಸ್ತಿ’ಗೆ ರಂಜಿನಿ ರಾಘವನ್‌ ಅವರ ‘ಸ್ವೈಪ್‌ ರೈಟ್‌’ ಕೃತಿ, ‘ಪುಸ್ತಕ ರತ್ನ ಪ್ರಶಸ್ತಿ’ಗೆ ಅಭಿರುಚಿ ಪ್ರಕಾಶನ ಹಾಗೂ ‘ಮುದ್ರಣರತ್ನ ಪ್ರಶಸ್ತಿ’ಗೆ ಗೌರಿ ಲ್ಯಾಮಿನೇಟರ್ಸ್‌ ಆಯ್ಕೆಯಾಗಿದೆ.

ADVERTISEMENT

ಈ ಪ್ರಶಸ್ತಿಗಳು ತಲಾ ₹10 ಸಾವಿರ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿಪತ್ರ ಒಳಗೊಂಡಿವೆ. 2024ರ ಜುಲೈ 6ರಂದು ಬೆಂಗಳೂರಿನಲ್ಲಿ ಗಾಂಧಿಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಂಜನಿ ರಾಘವಾನ್
ಟಂಕಸಾಲಿ ಎಸ್. ನಾಗರಾಜ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.