ಬೆಂಗಳೂರು: ಸಂಸ್ಥಾಪನೆ ದಿನಾಚರಣೆ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಮೇ ತಿಂಗಳು ಪೂರ್ತಿ ತನ್ನ ಪ್ರಕಟಣೆಗಳಿಗೆ ರಿಯಾಯಿತಿ ಘೋಷಿಸಿದೆ.
ಪ್ರಕಟಣೆಗಳ ಮೇಲೆ ಶೇ10ರಂದ ಶೇ75ರವರೆಗಿನ ರಿಯಾಯತಿ ಇರಲಿದೆ. ಪರಿಷತ್ತು 1,800ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದೆ. ಇದರಲ್ಲಿ ಎಂಟು ಸಂಪುಟಗಳ ಬೃಹತ್ ಕನ್ನಡ ಕನ್ನಡ ನಿಘಂಟು, ಕನ್ನಡ ಸಂಕ್ತಿಪ್ತ ನಿಘಂಟು, ರತ್ನಕೋಶ, ಸಂಕ್ಷಿಪ್ತ ಕನ್ನಡ ಇಂಗ್ಲೀಷ್ ನಿಘಂಟು, ಹಳೆಗನ್ನಡ ಕೃತಿಗಳು ಹಾಗೂ ಅವುಗಳ ಗದ್ಯಾನುವಾದಗಳು, ಶತಮಾನೋತ್ಸವ ಮಾಲಿಕೆ ಕೃತಿಗಳು, ವ್ಯಾಕರಣ ಛಂದಸ್ಸಿಗೆ ಸಂಬಂಧಿಸಿದಂತಹ ಶಾಸ್ತ್ರ ಗ್ರಂಥಗಳು, ಜೀವನ ಚರಿತ್ರೆಗಳು, ದಲಿತ ಮತ್ತು ಮಹಿಳಾ ಸಂಪುಟಗಳು, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟಗಳು, ಅಪರೂಪದ ಸಂಶೋಧನಾ ಕೃತಿಗಳೂ ಸೇರಿವೆ ಎಂದು ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.
ವಾರದ ಎಲ್ಲ ದಿನಗಳೂ ಬೆಳಿಗ್ಗೆ 10ರಿಂದ ಸಂಜೆ 7ಗಂಟೆಯವರೆಗೂ ಪರಿಷತ್ತಿನಲ್ಲಿ ಮಾರಾಟವಿರುತ್ತದೆ. ಈ ಕೊಡುಗೆಯ ಲಾಭ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.