ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) 2023 ಹಾಗೂ 2024ನೇ ಸಾಲಿನ ‘ಕನ್ನಡ ಕಾಯಕ ಪ್ರಶಸ್ತಿ’ ಪ್ರಕಟಿಸಿದೆ.
ಕನ್ನಡ ಪರ ಹೋರಾಟಗಾರರಾದ ಗೋಮೂರ್ತಿ ಯಾದವ್ (ಬೆಂಗಳೂರು), ಜಿ.ಬಾಲಾಜಿ (ಚಿಕ್ಕಬಳ್ಳಾಪುರ), ರಂಗಭೂಮಿ ಕಲಾವಿದರಾದ ಕೆ.ರೇವಣ್ಣ (ತುಮಕೂರು), ಕೃಷ್ಣಮೂರ್ತಿ ಕವತ್ತಾರ್ (ದಕ್ಷಿಣ ಕನ್ನಡ) ಸಾಹಿತಿಗಳಾದ ಮೀರಾಸಾಬಿಹಳ್ಳಿ ಶಿವಣ್ಣ (ಚಿತ್ರದುರ್ಗ) ಹಾಗೂ ಕೃಷ್ಣ ಕೊಲ್ಹಾರ ಕುಲಕರ್ಣಿ (ವಿಜಯಪುರ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ ₹10 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ.
ಈ ಹಿಂದೆ ಕಸಾಪ ಕಾರ್ಯದರ್ಶಿಯಾಗಿದ್ದ ವ.ಚ. ಚನ್ನೇಗೌಡ ಅವರು, ನಾಡು–ನುಡಿ, ನೆಲ ಹಾಗೂ ಜಲಕ್ಕೆ ಸಂಬಂಧಿಸಿದಂತೆ ಕೊಡುಗೆ ನೀಡಿದವರಿಗಾಗಿ ಈ ಪ್ರಶಸ್ತಿ ಸ್ಥಾಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.