ADVERTISEMENT

ದೇವರ ದಾಸಿಮಯ್ಯಗೆ ಅಪಮಾನ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 19:44 IST
Last Updated 11 ಏಪ್ರಿಲ್ 2019, 19:44 IST

ಬೆಂಗಳೂರು: ‘ಚುನಾವಣೆಯ ನೀತಿ ಸಂಹಿತೆ ನೆಪದಲ್ಲಿ ದೇವರ ದಾಸಿಮಯ್ಯ ಜಯಂತಿಯನ್ನು ಕಾಟಾಚಾರಕ್ಕೆ ಎಂಬಂತೆ ನಡೆಸಲಾಗಿದ್ದು, ಈ ಶ್ರೇಷ್ಠ ವಚನಕಾರನಿಗೆ ಅವಮಾನ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ನೇಕಾರರ ಜಾಗೃತಿ ವೇದಿಕೆಯ ರಾಜ್ಯ ಘಟಕ ಅಧ್ಯಕ್ಷ ಲಿಂಗರಾಜು ಡಿ.ನೊಣವಿನಕೆರೆ ಆಗ್ರಹಿಸಿದ್ದಾರೆ.

‘ದೇವರ ದಾಸಿಮಯ್ಯ ಜಯಂತಿಯನ್ನು ಏಪ್ರಿಲ್‌ 10ರಂದು ನಯನ ಸಭಾಂಗಣದಲ್ಲಿಇಲಾಖೆ ವತಿಯಿಂದ ಸರಳವಾಗಿ ಆಯೋಜಿಸಲಾಗಿತ್ತು.‌‌‌‌ ಅಂದು ಕೇವಲ 25 ನಿಮಿಷಗಳಲ್ಲಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಗಿತ್ತು. ಅಲ್ಲದೆ, ಸಮಾರಂಭದ ಮಧ್ಯೆಯೇ ನಿರ್ದೇಶಕರು ಎದ್ದುಹೋಗುವ ಮೂಲಕ ದಾಸಿಮಯ್ಯ ಅವರಿಗೆ ಅಗೌರವ ತೋರಿದ್ದರು’ ಎಂದು ದೂರಿದ್ದಾರೆ.

‘ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಅಡ್ಡಿಯಾಗದ ನೀತಿ ಸಂಹಿತೆ ಬೆಂಗಳೂರಿನಲ್ಲಿ ಮಾತ್ರ ಹೇಗೆ ಅಡ್ಡಿಯಾಯಿತು ಎಂದು ಪ್ರಶ್ನಿಸಿರುವ ಅವರು, ‘ಚುನಾವಣೆ ಬಳಿಕ ಅರ್ಥಪೂರ್ಣವಾಗಿ ಜಯಂತಿಯನ್ನು ಆಚರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.