ರಾಜರಾಜೇಶ್ವರಿನಗರ: ಕನ್ನಲ್ಲಿಯ ವೀರಶೈವ ಲಿಂಗಾಯತ ಸ್ಮಶಾನದಲ್ಲಿ 8 ಎಕರೆ ಪ್ರದೇಶದಲ್ಲಿ ಬೆಳೆಸಿದ 1,500ಕ್ಕೂ ಹೆಚ್ಚು ಹಣ್ಣು, ಹೂವಿನ ಗಿಡಗಳು ಬೆಂಕಿಗೆ ಆಹುತಿಯಾಗಿವೆ.
ಪ್ರಾಣಿ, ಪಕ್ಷಿ, ಜನರಿಗೆ ಹಣ್ಣು, ಹೂವು ಸಿಗಲಿ ಎಂದು ಕನ್ನಲ್ಲಿಯ ವೀರಶೈವ ಲಿಂಗಾಯತ ರುದ್ರಭೂಮಿ ಟ್ರಸ್ಟ್‌ನವರು ನೇರಳೆ, ಹತ್ತಿ, ಮಾವು, ಸಪೋಟ, ಹಲಸು, ದಾಳಿಂಬೆ, ನೆಲ್ಲಿ, ಸೀಬೆ, ಅರಳಿ ಮರ, ಬೇವು, ಸಂಪಿಗೆ, ಮಲ್ಲಿಗೆ ಸೇರಿದಂತೆ 3,500ಕ್ಕೂ ಹೆಚ್ಚು ಗಿಡಗಳನ್ನು ಐದು ವರ್ಷಗಳ ಹಿಂದೆ ನೆಟ್ಟು ಪೋಷಣೆ ಮಾಡಿಕೊಂಡು ಬಂದಿದ್ದರು. ಈ ಪೈಕಿ ಅರ್ಧದಷ್ಟು ಗಿಡಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
‘ಟ್ರಸ್ಟ್ ತೀರ್ಮಾನದಂತೆ ಸ್ಮಶಾನದ ಸುತ್ತ ಕಾಂಪೌಂಡ್ ನಿರ್ಮಿಸಿ 8 ಎಕರೆ ಪ್ರದೇಶದಲ್ಲಿ ವಿವಿಧ ಜಾತಿಯ ಸಸ್ಯಗಳನ್ನು ಬೆಳೆಸಲಾಗಿತ್ತು’ ಎಂದು ಟ್ರಸ್ಟ್‌ನ ಸದಸ್ಯ ಡಾ.ಎಸ್.ಶಾಂತರಾಜು ಹೇಳಿದರು.
30ಕ್ಕೂ ಹೆಚ್ಚು ಟ್ಯಾಂಕರ್ ನೀರು ಹಾಕಿ ಬೆಂಕಿ ನಂದಿಸಲಾಯಿತು. ಮತ್ತೊಂದು ಭಾಗದಲ್ಲಿ ಒಣಗಿನ ಹುಲ್ಲನ್ನು ತೆಗೆಸಿದ್ದರಿಂದ ಸುಮಾರು 2,000 ಸಸಿಗಳು ಉಳಿದಿವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.